- Advertisement -
ಸಿಡ್ನಿ: ಆಸ್ಟ್ರೇಲಿಯಾ ತಂಡದ ತಾರಾ ಸ್ಪಿನ್ನರ್ ನಾಥಾನ್ ಲಿಯಾನ್ ಬಹುಕಾಲದ ಪ್ರೇಯಸಿ ಎಮಾ ಮೆಕ್‍ಕಾರ್ತಿ ಜೊತೆ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಫ್ ಸ್ಪಿನ್ನರ್ ನಾಥಾನ್ ಲಿಯಾನ್ ಭಾನುವಾರ ಕುಟುಂಬ ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹ ಬಂಧನಕೊಳ್ಳಗಾದರು. 34 ವರ್ಷದ ಲಿಯಾನ್ ಇನ್‍ಸ್ಟಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಾಥನ್ ಲಿಯಾನ್ ಮತ್ತು ಎಮಾ ಮೆಕ್‍ಕಾರ್ತಿ ಕಳೆದ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈ ಜೋಡಿ 20121ರಲ್ಲಿ ನಿಶ್ಚಿತರ್ಥ ಮಾಡಿಕೊಂಡಿತ್ತು.
ಯುವ ಜೋಡಿಗೆ ತಂಡದ ಸಹ ಆಟಗಾರರಾದ ಶೇನ್ ಅಬೋಟ್, ಪೀಟರ ಸಿಡ್ಲ್ ಮತ್ತು ಮಾಜಿ ಆಟಗಾರ ಬ್ರೇಟ್ ಲೀ ಶುಭಾಶಯ ತಿಳಿಸಿದ್ದಾರೆ.
- Advertisement -