Saturday, July 27, 2024

Latest Posts

ನಾಳೆ ರಾಜ್ಯದಲ್ಲಿ ಅಧಿಕೃತ ಆಪರೇಷನ್ ಕಮಲಕ್ಕೆ ಚಾಲನೆ ಸಿಗಲಿದೆ: ಶಂಕರ್ ಪಾಟೀಲ್ ಮುನೇನಕೊಪ್ಪ

- Advertisement -

Political News: ನಾಳೆ ರಾಜ್ಯದಲ್ಲಿ ಅಧಿಕೃತ ಆಪರೇಷನ್ ಕಮಲಕ್ಕೆ ಚಾಲನೆ ಸಿಗಲಿದ್ದು, ಜಗದೀಶ್ ಶೆಟ್ಟರ್ ಜೊತೆಗೆ ಬಿಜೆಪಿ ಬಿಟ್ಟು ಹೋದವರನ್ನು ವಾಪಸು ಪಕ್ಷಕ್ಕೆ ಕರೆ ತರಲು ವೇದಿಕೆ ಸಜ್ಜಾಗಿದೆ ಅಂತ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಕರ್ನಾಟಕ ಟಿವಿ ಜೊತೆಗೆ ಮಾತನಾಡಿದ ಅವರು,ಈ ಹಿಂದಿನ ಸಭೆಯಲ್ಲಿ ಶೆಟ್ಟರ್ ಜೊತೆಗೆ ಪಕ್ಷ ಬಿಟ್ಟು ಹೋದವರನ್ನು ವಾಪಸು ಕರೆತರುವ ಬಗ್ಗೆ ನಿರ್ಧಾರ ಮಾಡಲಾಗಿದೆ.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಹ ಮುಖಂಡರು ಘರವಾಪ್ಸಿ ಬಗ್ಗೆ ನಿರ್ಧಾರ ಮಾಡುತ್ತಾರೆ. ಶಾಸಕ ಮಹೇಶ್ ಟೆಂಗಿನಕಾಯಿ ಅವರ ನೇತೃತ್ವದಲ್ಲಿ ಘರವಾಪ್ಸಿ ಮಾಡಲು ನಿರ್ಧಾರ ಮಾಡಲಾಗಿದೆ. ನನಗೆ ಅಧಿಕೃತವಾಗಿ ಆಹ್ವಾನ ಬಂದಿಲ್ಲ‌ ಬಂದ್ರೆ ಖಂಡಿತವಾಗಿ ಕಾರ್ಯಕ್ರಮಕ್ಕೆ ಹೋಗುವೆ ಎಂದರು..

ಇನ್ನೂ ಜಗದೀಶ್ ಶೆಟ್ಟರ್ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸ್ವಾಭಿಮಾನ ಮತ್ತು ಗೌರವಕ್ಕೆ ದಕ್ಕೆಯಾಗದಂತೆ ನಡೆದುಕೊಳ್ಳುವುದಾಗಿ‌ ಹೈಕಮಾಂಡ್ ಮಾತು ಕೊಟ್ಟಿದೆ. ಪ್ರಧಾನಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಶೆಟ್ಟರ್ ಪ್ರಮುಖ ಪಾತ್ರ ವಹಿಸುತ್ತಾರೆ. ಶೆಟ್ಟರ್ ಗೆಲ್ಲಿಸುವುದು ಸೇರಿದಂತೆ ಹೈಕಮಾಂಡ್ ಏನೆ ಟಾಸ್ಕ್ ಕೊಟ್ಟರೆ ಅದನ್ನು ನಿಭಾಯಿಸುವೆ. ಶೆಟ್ಟರ್ ಎಲ್ಲಿ ಸ್ಪರ್ಧೆ ಮಾಡಿಸಬೇಕೆಂಬುವುದು ಈಗಾಗಲೇ ಹೈಕಮಾಂಡ್ ಮನಸ್ಸಿನಲ್ಲಿದೆ. ಟಿಕೆಟ್ ವಿಚಾರದಲ್ಲಿ ಸಣ್ಣಪುಟ್ಟ ಗೊಂದಲಗಳು ಇರೋದು ನಿಜ ಆದರೆ ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ನೀಡೊದಿಲ್ಲ ಎನ್ನುವ ಮಾತು ನಾನು ಒಪ್ಪುವುದಿಲ್ಲ ಎಂದಿದ್ದಾರೆ..

‘ರಾವಣ ತಲೆಗಳ ಕಾಂಗ್ರೆಸ್ ಪಕ್ಷಕ್ಕೆ ಮೈಯ್ಯೆಲ್ಲಾ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ’

‘ಪ್ರಜ್ವಲ್ ರೇವಣ್ಣರ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಇದ್ದಾರೆ ಎಂಬ ಹೇಳಿಕೆ ಹಾಸ್ಯಸ್ಪದ’

‘ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು..? ಅದು ಧಾರ್ಮಿಕ ಸಂಕೇತ ಅಷ್ಟೇ..’

- Advertisement -

Latest Posts

Don't Miss