Monday, September 9, 2024

Latest Posts

ತುಂಗಭದ್ರಾ ಡ್ಯಾಮ್ ಗೇಟ್ ಹಾನಿಗೆ ಅಧಿಕಾರಿಗಳೇ ಹೊಣೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಪಾದಯಾತ್ರೆ ಮುಗೀತಿದ್ದಂತೆಯೇ ರೆಬಲ್ ಗಳ ಸಭೆ ನಡೆಯಲಿದೆ ಎಂದಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜಾರಕಿಹೊಳಿ ಸಭೆ ಕುರಿತು ಪ್ರತಿಕ್ರಿಯಿಸಿರುವ ಜೋಶಿ, ಅವರು ಯಾವಾಗ ಸಭೆ ಮಾಡ್ತಿದಾರೆ ಅಂತ ನನಗೆ ಗೊತ್ತಿಲ್ಲ. ಎಲ್ಲಿ ಸಭೆ ಮಾಡ್ತಿದಾರೆ ಅನ್ನೋದರ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿ ರಾಜ್ಯ ಉಸ್ತುವಾರಿಗಳು ಮತ್ತು ರಾಜ್ಯಾಧ್ಯಕ್ಷರು ನೋಡಿಕೊಳ್ತಾರೆ ಎಂದು ಜೋಶಿ ಹೇಳಿದ್ದಾರೆ.

ಇನ್ನು ತುಂಗಭದ್ರಾ ಡ್ಯಾಂ ಗೇಟ್ ಹಾನಿ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಈ ತಪ್ಪಿಗೆ ಅಧಿಕಾರಿಗಳೇ ಹೊಣೆ. ಇದೊಂದು ದುರ್ದೈವದ ಸಂಗತಿ. ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಗೇಟ್ ಗೆ ಹಾನಿಯಾಗಿರೋದ್ರಿಂದ ದೊಡ್ಡ ಪ್ರಮಾಣದಲ್ಲಿ ನೀರು ಹೊರಬಿಡಬೇಕು. ಹೀಗಿರುವಾಗ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು. ಅಧಿಕಾರಿಗಳ ಅಚಾತುರ್ಯದಿಂದ ಮುಂದೆ ರೈತರು ತೊಂದರೆ ಅನುಭವಿಸಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆಗದೇ ಇದ್ದಲ್ಲಿ ತೀವ್ರ ತೊಂದರೆ ಆಗಲಿದೆ.  ಎಲ್ಲಿ ಲೋಪದೋಷವಾಗಿದೆ ಅನ್ನೋದ್ರ ಪತ್ತೆ ಹಚ್ಚಬೇಕು. ಲೋಪ ಎಸಗಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss