ಅಗಸ್ಟ 10 ನಂತರ ಎಸ್ಎಸ್ ಎಲ್ಸಿ ಫಲಿತಾಂಶ ಪ್ರಕಟ

www.karnatakatv.net : ಕೊರೊನಾ ಜೊತೆ ಜೊತೆಗೆ ಎಸ್ ಎಸ್ಎಲ್ಸಿ ಪರೀಕ್ಷೆಯನ್ನು ಸೂಸರ್ಜಿತವಾಗಿ ನಡೆಸಿ ಯಾವುದೇ ತೊಂದರೆಯಾಗದಂತೆ  ಯಶಸ್ವಿಯಾಗಿ ನಡೆದಿದೆ ಹಾಗೇ ಅದರ ಫಲಿತಾಂಶವನ್ನು ಕೂಡಾ ಅಗಸ್ಟ 10ರ ನಂತರ ಘೋಷಣೆ ಮಾಡಲಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಗುರುವಾರ ವಿವಿಧ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ.96.65 ಹಾಜರಾತಿ ದಾಖಲಾಗಿದೆ. ಕಳೆದ ವರ್ಷದ ವಾರ್ಷಿಕ ಪರೀಕ್ಷೆಗಿಂತ ಈ ಬಾರಿ ಹೆಚ್ಚು ಮಕ್ಕಳು ಹಾಜರಾಗಿದ್ದಾರೆ. ಭಾಷಾ-1 ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 8,19,694 ಅಭ್ಯರ್ಥಿಗಳಲ್ಲಿ 8,16,544 ಅಭ್ಯರ್ಥಿಗಳು ಹಾಜ ರಾಗಿದ್ದಾರೆ. ಶೇ. 99.62 ಹಾಜರಾತಿ ದಾಖಲಾಗಿದ್ದು, ಕಳೆದ ವರ್ಷ ಶೇ. 98.41 ಹಾಜರಾತಿ ಇತ್ತು.

About The Author