Hassan News:
ಹಾಸನದಲ್ಲಿ ಒಕ್ಕಲಿಗರ 3ಎ ಮೀಸಲಾತಿಯನ್ನು 10 ಪರ್ಸೆಂಟ್ ಹೆಚ್ಚಳ ಮಾಡಬೇಕೆಂದು ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಎರಡು ಮೂರು ದಿನದ ಹಿಂದೆ, ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು ಒಡಗೂಡಿ ಚರ್ಚೆ ಮಾಡಿ ಮೀಸಲಾತಿ ಬಗ್ಗೆ ವಿಶೇಷವಾದ ತೀರ್ಮಾನ ಮಾಡಿದ್ದಾರೆ.15 ಇದ್ದದ್ದನ್ನ 17, 3 ಇದ್ದದ್ದನ್ನ 7 ಎಸ್ಸಿಎಸ್ಟಿಗೆ ಮೀಸಲಾತಿ ವಿಚಾರದಲ್ಲಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅದನ್ನು ನಾನು ಸ್ವಾಗತ ಮಾಡುತ್ತೇನೆ . ಅದರ ಜೊತೆಯಲ್ಲಿ ಒಕ್ಕಲಿಗರಿಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷನಾಗಿ ಸರ್ಕಾರಕ್ಕೆ ನನ್ನ ಆಗ್ರಹ ಏನೆಂದರೆ, ನಮಗೆ 3ಎ ಮೀಸಲಾತಿಯಲ್ಲಿ 4 ಪರ್ಸೆಂಟ್ ಅವಕಾಶ ಮಾಡಿಕೊಟ್ಟಿದ್ದಾರೆ.ನಮ್ಮ ಒಕ್ಕಲಿಗ ಸಮಾಜ ರಾಜ್ಯದಲ್ಲಿ 16 ಪರ್ಸೆಂಟ್ ಇದೆ.ಇಲ್ಲಿಯೂ ಕೂಡಾ ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ಜನಾಂಗ ಇದೆ.ಇತ್ತೀಚಿನ ದಿನಮಾನಗಳಲ್ಲಿ ಹವಾಮಾನ ವೈಪರೀತ್ಯಗಳಿಂದ ತುಂಬಾ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ 4 ಪರ್ಸೆಂಟ್ ಮೀಸಲಾತಿ ಇರೋದನ್ನ ನಮ್ಮ ಜನಸಂಖ್ಯೆಗಳಿಗನುಗುಣವಾಗಿ ತುಂಬಾ ಕಡಿಮೆ ಆಗಿರೋ ಹಿನ್ನೆಲೆಯಲ್ಲಿ .ದೂರದ ಊರಿಗಳಿಂದ ತುಂಬಾ ಖಾರವಾದ ಕರೆಗಳು ಬರ್ತಾ ಇದ್ದಾವೆ. ಕೂಡಲೇ ನೀವು ಸರ್ಕಾರಕ್ಕೆ ಒತ್ತಾಯ ಮಾಡದೇ ಹೋದರೆ.ಬೇರೆ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ ಅಂತಾ ಒತ್ತಾಯ ಮಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಒತ್ತಾಯ ಏನೆಂದರೆ 4 ಪರ್ಸೆಂಟ್ ಇರೋ ಮೀಸಲಾತಿಯನ್ನ ಪ್ಲಸ್ 6 ಮಾಡಿ 10 ಅಂತಾ ಘೋಷಣೆ ಮಾಡಬೇಕು ಅಂತಾ ಆಗ್ರಹಿಸುತ್ತೇನೆ. ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಆರ್ಥಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ನೂರು ಕುಟುಂಬದಲ್ಲಿ 70 ಕುಟುಂಬ ಸಂಕಷ್ಟದಲ್ಲಿದೆ. ಆದ್ದರಿಂದ 3 ಎ ಮೀಸಲಾತಿಯೇನಿದೆ ಅದನ್ನ 10 ಪರ್ಸೆಂಟ್ ಗೆ ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ.ಸ್ವಾಮೀಜಿಯವರನ್ನೂ ದೂರವಾಣಿ ಮೂಲಕ ಸಂಪರ್ಕಿಸಿದ್ದೇವೆ.ನಿರ್ಮಲಾನಂದ ಸ್ವಾಮೀಜಿಯವರೂ ಕೂಡ ಕಾರ್ಯಕ್ರಮದ ನಿಮಿತ್ತ ಚನ್ನರಾಯಪಟ್ಟಣಕ್ಕೆ ಬರ್ತಾ ಇದ್ದಾರೆ.ಅವರೊಂದಿಗೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ,ಎರಡು ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ನೇರವಾಗಿ ಮ್ಯಾಮೋರಂಡಮ್ ಕೊಡ್ತೇವೆ ,ರಾಜ್ಯ ಸರ್ಕಾರ ಇದನ್ನ ಪುರಸ್ಕರಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.