- Advertisement -
www.karnatakatv.net : ಕೊರೊನಾದ ನಡುವೆಯು ಒಲಂಪಿಕ್ಸ್ ಹಬ್ಬ ನಡೆಯುತ್ತಿದ್ದು ಒಲಂಪಿಕ್ಸ್ ಜಪಾನ್ ನ ಟೋಕಿಯೋದಲ್ಲಿ ನಾಳೆಯಿಂದ ಚಾಲನೆ ಸಿಗಲಿದೆ.
ಈ ಬಾರಿ ಕೊರೋನಾ ಮಹಾಮಾರಿಯಿಂದಾಗಿ ಪ್ರೇಕ್ಷಕರಿಲ್ಲದೇ ಕ್ರೀಡಾ ಕೂಟ ನಡೆಯಲಿದೆ. ಹಾಗಿದ್ದರೂ ಒಲಂಪಿಕ್ಸ್ ಗ್ರಾಮದಲ್ಲಿ ಕ್ರೀಡಾ ಮಹಾಹಬ್ಬದ ಉದ್ಘಾಟನಾ ಸಮಾರಂಭ ಎಂದಿನಂತೆ ನಡೆಯಲಿದೆ. ಆದರೆ ಮರುದಿನವೇ ಸ್ಪರ್ಧೆಯಿರುವ ಕ್ರೀಡಾಳುಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ. ಭಾರತದ ಪರ ಧ್ವಜಧಾರಿಯಾಗಿ ಹಾಕಿ ನಾಯಕ ಮನ್ ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಭಾರತದಿಂದ ಉದ್ಘಾಟನೆಗೆ ಆರು ಮಂದಿ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
- Advertisement -