Saturday, July 27, 2024

Latest Posts

ಮೇ.12 ರಂದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಮುಕ್ತ ನಿಕಾಲಿ ಕುಸ್ತಿ ಪಂದ್ಯಾವಳಿ

- Advertisement -

Hubli News: ಹುಬ್ಬಳ್ಳಿ: ಜನಸ್ನೇಹಿ ರಾಜು ಮಾರುತಿ ಪೆಜೋಳ್ಳಿ ಇವರ ಆಶ್ರಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ಮೇ.12 ರಂದು ಮಧ್ಯಾಹ್ನ 2.30 ರಿಂದ ಅಳ್ನಾವರದ ಎ.ಪಿ.ಎಂ.ಸಿ ಹತ್ತಿರದ ಬಯಲಿನಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಹೊನಲು ಬೆಳಕಿನ ಮುಕ್ತ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಮಾಜ ಸೇವಕ ರಾಜು ಪೆಜೋಳ್ಳಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂಸ್ಕೃತಿ, ಆಚಾರ-ವಿಚಾರ ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ದೇಶಿ ಕ್ರೀಡೆ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕುಸ್ತಿಪಟುಗಳಿದ್ದಾರೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ, ವೇದಿಕೆಯಿಲ್ಲದ ಕಾರಣ ಅವರು ಎಲೆಮರಿಕಾರಿಯಂತೆ ಉಳಿಯುತ್ತಿದ್ದಾರೆ. ಹೀಗಾಗಿ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಲು ಒಂದು ದಿನದ ಮುಕ್ತ ನಿಕಾಲಿ ಕುಸ್ತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಪಂದ್ಯಾವಳಿಯನ್ನು ಕರ್ನಾಟಕ ಕೇಸರಿ ಬಿರುದು ಪಡೆದುಕೊಂಡಿರುವ ಅಳ್ನಾವರದ ಶಂಕರ ಹನುಮಂತ ಅಷ್ಟೇಕರ ಚಾಲನೆ ನೀಡಲಿದ್ದು, ಮೈದಾನದ ಪೂಜೆಯನ್ನು ಜೈವಂತ ರಾಮಣ್ಣ ಪೆಜೋಳ್ಳಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಮರಾಠ ಸಮಾಜ ಗೋಸಾಯಿಮಠದ ಶ್ರೀ ಶ್ರೀ ಶ್ರೀ ಮಂಜುನಾಥ ಭಾರತೀಯ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಶಾಸಕರಾದ ಆರ್.ವಿ.ದೇಶಪಾಂಡೆ, ವಿಪ‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅತಿಥಿಗಳಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಡೆಪ್ಯುಟಿ ಡ್ರಗ್ಸ್ ಕಂಟ್ರೋಲರ್ ರಾಜಶೇಖರ ಮಾಲಿ, ಪುಣೆಯ ಸಿಎಮ್ಇ ಸೆಕ್ಯೂರಿಟಿ ಆಫೀಸರ್ ಪುಷ್ಪೆಂದರ ಸಿಂಗ್, ಸಿಎಮ್ಇ ಡೆಪ್ಯುಟಿ ಸೆಕ್ಯೂರಿಟಿ ಆಫೀಸರ್ ಅಶೋಕ ಸಾಟೆ, ಅಳ್ನಾವರ ತಹಶಿಲ್ದಾರ ಪ್ರಕಾಶ ಮಂಡಮ್ ಸೇರಿದಂತೆ ಅನೇಕ ಗಣ್ಯಮಾನ್ಯರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಮುಕ್ತ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 225 ಕುಸ್ತಿಪಟುಗಳ ಸೆಣಸಾಟ ನಡೆಸಲಿದ್ದು, ಇವರಲ್ಲಿ ಮುಖ್ಯವಾಗಿ ಭಾರತ ಕೇಸರಿ ಜಸ್ಸಾ ಪಟ್ಟಿ, ಇರಾನ್’ನ ಮಿರ್ಜಾ, ಡಬಲ್ ಕೇಸರಿ ಬೆಳವಟಿಯ ರೋಹನ್ ಹಾಗೂ ಮಹಿಳಾ ವಿಭಾಗದಲ್ಲಿ ಖೇಲೋ ಇಂಡಿಯಾ ಸಿಲ್ವರ್ ಮೆಡಲ್ ಲೀನಾ ಸಿದ್ದಿ, ನ್ಯಾಷನಲ್ ಮೆಡಲಿಸ್ಟ್ ಮಹಾರಾಷ್ಟ್ರದ ಕೀರ್ತಿ ಗುಡಲೇಕರ, ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತೆ ಗೋಪವ್ವಾ ಬೋಡ್ಕಿ, ಕರ್ನಾಟಕ ಕೇಸರಿ ಗಾಯತ್ರಿ ಸುತಾರ, ಇರಾನ್’ನ ಮುಬಿನಾ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ. ವಿಜೇತರಿಗೆ 1500 ರಿಂದ 12 ಲಕ್ಷದ ವರೆಗೆ ಬಹುಮಾನ ನಿಗಧಿ ಪಡಿಸಲಾಗಿದೆ ಎಂದರು.

ಈ ಪಂದ್ಯಾವಳಿ ವೀಕ್ಷಣೆಗೆ ಮುಕ್ತ ಅವಕಾಶವಿದ್ದು ನಾಡಿನ ಕುಸ್ತಿಪಟುಗಳು, ಕುಸ್ತಿ ಅಭಿಮಾನಿಗಳು, ಸಾರ್ವಜನಿಕರು ಎಲ್ಲರೂ ಭಾಗವಹಿಸಿ, ಪಂದ್ಯಾವಳಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಮದುವೆ ಬಳಿಕವೂ ನಟನೆ ಮುಂದುವರಿಸುತ್ತೇನೆ: ನಟಿ ಮಾನ್ವಿತಾ ಕಾಮತ್

ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಂ ಪರ ಮತಯಾಚನೆ: ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ

- Advertisement -

Latest Posts

Don't Miss