Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ರಾಜಕೀಯವನ್ನು ರಾಜಕಾರಣಿಗಳು ಮಾಡಬೇಕು ಹೊರೆತು ಬೇರೆ ಬೇರೆಯವರು ಇದರಲ್ಲಿ ಭಾಗಿಯಾಗಬಾರದು. ಇದು ಬಹಳಷ್ಟು ದುರ್ದೈವದ ಸಂಗತಿ. ಒಂದು ಸಮುದಾಯದ ಶ್ರೀಗಳಿಂದ ಹೇಳಿಕೆ ನೀಡಿಸುವುದು ಸರಿಯಲ್ಲಾ ಎಂದು ಹೇಳಿದ್ದಾರೆ.
ಎಲ್ಲಾ ಗುರುಗಳು ಸಹ ನಮಗೆ ಮಾರ್ಗದರ್ಶನ ನೀಡುತ್ತಾರೆ. ರಾಜಕೀಯವೇ ಬೇರೆ ರಾಜಕೀಯದಲ್ಲಿ ಗುರುಗಳನ್ನು ಬಳಕೆ ಮಾಡುವ ಕೆಲಸ ಯಾರು ಮಾಡಬಾರದು. ಅದು ಯಾವುದೇ ಪಕ್ಷ ಇರಲಿ. ಕಾಂಗ್ರೆಸ್ ಆಂತರಿಕ ಕಚ್ಚಾಟ ಬಹಳಷ್ಟು ದೊಡ್ಡ ಪ್ರಯಾಣದಲ್ಲಿ ಆಗಿದೆ. ಸ್ವತಃ ತನ್ನಷ್ಟಕ್ಕೆ ತಾನೆ ಅಧಿಪತನ ಹೊಂದಲಿದೆ. ಆಗ ನಮ್ಮ ಪಕ್ಷದ ಹೈಕಮಾಂಡ್ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಸ್ವಾಮೀಜಿಗಳು ಸ್ವತಃ ಹೇಳಿಕೆ ನೀಡುವುದಿಲ್ಲ ಯಾರಾದರೂ ರಾಜಕೀಯ ವ್ಯಕ್ತಿಗಳು ಅವರಿಂದ ಹೇಳಿಕೆ ನೀಡಿಸುತ್ತಾರೆ ಎಂದು ಮಹೇಶ್ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಿಟಿ ಸಂಚಾರ ಮಾಡಿರುವ ರೋಡ್ ಯಾರು ಮಾಡಿದ್ದಾರೆ ಅಂತ ಸಂತೋಷ ಲಾಡ್ ಯೋಚನೆ ಮಾಡಲಿ. ಹುಬ್ಬಳ್ಳಿಯನ್ನು ಸಿಂಗಾಪುರ್ ಮಾಡತ್ತಿವಿ ಅಂತ ನಾವು ಎಲ್ಲಿ ಹೇಳಿಲ್ಲ. ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಯಿತು ಏನು ಅನುದಾನ ಕೊಟ್ಟಿದ್ದಿರಿ. ಸ್ವತಃ ಕಾಂಗ್ರೆಸ್ ಶಾಸಕರೇ ಅನುದಾನ ಕೇಳುವ ಪರಿಸ್ಥಿತಿ ಬಂದಿದೆ. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಗ್ಯಾರಂಟಿ ಭಾಗ್ಯ ತೆಗೆದು ಹಾಕಿ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಗ್ಯಾರಂಟಿಗಳು ಚುನಾವಣೆಯಲ್ಲಿ ಸಹಾಯ ಆಗಿಲ್ಲ ಅಂತ ಕಾಂಗ್ರೆಸ್ ಶಾಸಕರು ಹೇಳತ್ತಾರೆ. ಹಾಗಿದ್ರೆ ಚುನಾವಣೆ ಸಲುವಾಗಿ ಗ್ಯಾರಂಟಿ ನೀಡಿದ್ದ್ರಾ. ವೋಟ್ ಗಾಗಿ ಗ್ಯಾರಂಟಿ ನೀಡಿದ್ದ್ರಾ?. ಗ್ಯಾರಂಟಿಗಳಿಗೆ ನಮ್ಮ ವಿರೋಧ ಇಲ್ಲ ಆದರೆ ಇದರಿಂದಾಗಿ ಅಭಿವೃದ್ಧಿ ನಿಲ್ಲಬಾರದು. ಕಳೆದ ಒಂದು ವರ್ಷ ಏನು ಅಭಿವೃದ್ಧಿ ಮಾಡಿದ್ದಾರೆ ಅಂತ ಶಾಸಕರು ಎದೆತಟ್ಟಿ ಹೇಳಲಿ. ಕಾಂಗ್ರೆಸ್ ಶಾಸಕರು ನಮ್ಮ ಜೊತೆಗೆ ಮಾತನಾಡುವಾಗ ಬಿಜೆಪಿ ಸರ್ಕಾರ ಇದ್ದಾಗ ಚೆನ್ನಾಗಿತ್ತು. ಆಗ ಅಭಿವೃದ್ಧಿ ಆಗುತ್ತಿತ್ತು ಆದರೆ ಈಗ ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತ ಆಗಿದೆ ಅಂತ ಅಳಲು ತೋಡಿಕೊಳ್ಳತ್ತಾರೆ. ಸರ್ಕಾರದ ಯಾವುದೇ ಸ್ಥಿತಿಯಲ್ಲಿ ಸರಿ ಇಲ್ಲಾ. ಒಂದು ಕಡೆ ರಾಜಣ್ಣ ನಾನೇ ಸಿಎಂ ಅಂತಾರೆ ಚನ್ನಗಿರಿ ಶಾಸಕ ಡಿಕೆ ಅವರನ್ನು ಸಿಎಂ ಮಾಡಿ ಅಂತಾರೆ. ಇದನ್ನು ನೋಡಿದ್ರೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲಾ ಅಂತ ಗೊತ್ತಾಗುತ್ತದೆ. ಇದು ಬಹಳ ದೊಡ್ಡ ಪೆಟ್ಟು ಕಾಂಗ್ರೆಸ್ಗೆ ನೀಡುತ್ತದೆ ಎಂದು ಮಹೇಶ್ ಟೆಂಗಿನಕಾಯಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಎದ್ದು ಕಾಣುತ್ತಿದೆ. ಕೊಲೆಯಾದ ಅಂಜಲಿ ಅಂಬಿಗರ ಮನೆಗೆ ಘೋಷಣೆ ಮಾಡಿದ ಪರಿಹಾರ ಸಹ ನೀಡಿಲ್ಲ.ಸ್ವತಃ ತಾನೇ ಘೋಷಣೆ ಮಾಡಿರುವ ಹಣವನ್ನು ನೀಡದಿರುವುದು ಬಹಳಷ್ಟು ದುರ್ದೈವದ ಸಂಗತಿ. ಉಳ್ಳವರು ಉದ್ದ್ರೆ ಪರಿಹಾರ ಬೇಕಿಲ್ಲ ಆದರೆ ಅಂಜಲಿ ಕುಟುಂಬ ಬಹಳಷ್ಟು ಬಡತನದಲ್ಲಿದೆ. ದುಡಿಯವ ಮಗಳನ್ನು ಕಳೆದುಕೊಂಡು ಕಂಗಾಲಾಗಿದೆ. ಆ ಕುಟುಂಬಕ್ಕೆ ಇರಲು ಮನೆ ಸಹ ಇಲ್ಲ ಒಂದು ಆಶ್ರಯ ಮನೆಯನ್ನಾದರು ನೀಡಬಹುದಿತ್ತು. ಒಂದು ಕಡೆ ಗ್ಯಾರಂಟಿ ಭಾಗ್ಯ ಮತ್ತೊಂದು ಕಡೆ ಹಗರಣ ಭಾಗ್ಯದಲ್ಲಿ ಸರ್ಕಾರ ಸಿಲುಕಿದೆ. ಮತ್ತೊಂದು ಕಡೆ ಸಿಎಂ ಡಿಸಿಎಂ ಕಚ್ಚಾಟ ದಿಂದ ಬೇರೆಕಡೆ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.
ಡಿಸಿಎಂ ಸೃಷ್ಠಿ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ: ಕೇಂದ್ರ ಸಚಿವ ಜೋಶಿ
ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಒಂದು ಲಕ್ಷ ಕೋಟಿ ರೂಪಾಯಿ ಕೊಟ್ಟಿದೆ: ಕೇಂದ್ರ ಸಚಿವ ಜೋಶಿ

