Banglore News:
ಮುಂದಿನ ವಾರ ಬರುವ ಓಣಂ ಹಬ್ಬಕ್ಕೆ ರಾಜ್ಯ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿಯಿಂದ ಕೇರಳಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 6 ಹಾಗೂ ಸೆಪ್ಟೆಂಬರ್ 7ರಂದು ಬೆಂಗಳೂರಿನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 8ರಂದು ಓಣಂ ಹಬ್ಬವಿದೆ. ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿ ನಗರದಿಂದ ಈ ವಿಶೇಷ ಬಸ್‌ಗಳು ಸಂಚರಿಸಲಿವೆ.
ಕೇರಳದ ಕಣ್ಣೂರು, ಕೋಯಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ಶಿರೂರ್, ಕೊಟ್ಟಾಯಂ ಮತ್ತು ತಿರುವಂತಪುರಂಗೆ ಈ ವಿಶೇಷ ಬಸ್‌ಗಳು ಹೋಗುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. www.ksrtc.karnataka.gov.in ವೆಬ್ಸೈಟ್ನಲ್ಲಿ ಬುಕ್ಕಿಂಗ್ಗೆ ಅವಕಾಶವಿರುವುದು. 4 ಕ್ಕಿಂತ ಹೆಚ್ಚು ಟಿಕೆಟ್ ಬುಕ್ಕಿಂಗ್ ಮಾಡಿದರೆ ಶೇ. 5ರಷ್ಟು ರಿಯಾಯಿತಿ ಹಾಗು ಎರಡೂ ಕಡೆ ಸಂಚರಿಸುವ ಟಿಕೆಟ್ ಕಾಯ್ದಿರಿಸಿದರೆ ಶೇ. 10ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ – ಸಚಿವ ಕೆ.ಗೋಪಾಲಯ್ಯ