Friday, October 18, 2024

Latest Posts

ಕಿಚ್ಚ ಸುದೀಪ್ ರ ಫ್ಯಾಂಟಮ್ ಸಿನಿಮಾಗೆ ಮತ್ತೆ ಅಡ್ಡಿ..!

- Advertisement -

wwwkarnatakatv.net : ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಕಿಚ್ಚನ ಯಾವುದೇ ಸಿನಿಮಾ ಆಗ್ಲೀ ಅನೌನ್ಸ್ ಆದ ದಿನದಿಂದ್ಲೇ ಒಂದು ರೀತಿಯ ಹವಾ ಸೃಷ್ಟಿಸಿಬಿಡುತ್ವೆ.. ಅದೇ ರೀತಿ ಫ್ಯಾಂಟಮ್ ಸಿನಿಮಾ ಕೂಡ, ಲಾಂಚ್ ಆದ ದಿನದಿಂದ್ಲೂ ಒಂದಲ್ಲಾ ಒಂದು ವಿಶೇಷತೆಗಳಿಂದಾಗಿ ಸದ್ದು ಮಾಡ್ತಾನೇ ಇದೆ.. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರ್ತಿರುವ ಈ ಸಿನಿಮಾದ ಚಿತ್ರೀಕರಣ ಕೊರೋನಾ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಈ ಮೊದಲು ಮುಂದೂಡಲಾಗಿತ್ತು.. ಲಾಕ್ ಡೌನ್ ಮುಗಿದು ರಾಜ್ಯ ಸರ್ಕಾರ ಅನುಮತಿ ನೀಡಿದ ಬಳಿಕ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಹೇಳಿತ್ತು.. ಶೂಟಿಂಗ್ ಗೆ ಬೇಕಾದ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿತ್ತು.. ಆದ್ರೆ ಇದೀಗ ಚಿತ್ರತಂಡ ಚಿತ್ರದ ಶೂಟಿಂಗ್ ನ್ನ ಮತ್ತೆ ಮುಂದೂಡಿದೆ..

ಎಸ್, ಫ್ಯಾಂಟಮ್ ಚಿತ್ರದ ಶೂಟಿಂಗ್ ಇದೀಗ ಮತ್ತೆ ಕೊರೋನಾ ಕಾರಣದಿಂದಾಗಿ ಪೋಸ್ಟ್ ಪೋನ್ ಆಗಿದೆ.. ಈ ಹಿಂದೆ ಜುಲೈ 1 ರಿಂದ ಈ ಚಿತ್ರದ ಶೂಟಿಂಗ್ ಆರಂಭಿಸುತ್ತೇವೆ ಎಂದು ಫ್ಯಾಂಟಮ್ ಚಿತ್ರತಂಡ ಹೇಳಿತ್ತು.. ಆದ್ರೆ ಇದೀಗ ಮತ್ತೆ ಕೊರೋನಾ ಕಿರಿಕಿರಿ ಹೆಚ್ಚಾಗ್ತಿರೋ ಕಾರಣ ಸಿನಿಮಾ ಚಿತ್ರೀಕರಣವನ್ನ ಮುಂದಕ್ಕೆ ಹಾಕಲಾಗಿದೆ.. ಇದ್ರಿಂದಾಗಿ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ..

ಅಂದಹಾಗೆ ಕಿಚ್ಚ ಈ ಸಿನಿಮಾದಲ್ಲಿ ವಿಕ್ರಂ ರೋಣಾ ಅನ್ನುವ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ಮೀಸೆ ಬಿಟ್ಟ ಸುದೀಪ್ ಅವರ ಅರ್ಧ ಮುಖ ಇರುವ ಚಿತ್ರದ ಪೋಸ್ಟರ್ ಈಗಾಗ್ಲೇ ರಿವೀಲ್ ಆಗಿದೆ.. ಈ ಪೋಸ್ಟರ್ ನೋಡಿದ್ರೆ ಫ್ಯಾಂಟಮ್ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗುತ್ತೆ.. ಈ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ ಶ್ರದ್ಧಾ ಶ್ರೀನಾಥ್, ನಿರೂಪ್ ಭಂಡಾರಿ ಹೀಗೆ ಇನ್ನೂ ಸಾಕಷ್ಟು ಜನ ಕಲಾವಿದರು ಬಣ್ಣಹಚ್ಚಿದ್ದಾರೆ.. ಅಜನೀಶ್ ಲೋಕನಾಥ್ ಕಿಚ್ಚನ ಬಹುನಿರೀಕ್ಷಿತ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.. 

ಫ್ಯಾಂಟಮ್ ಚಿತ್ರಕ್ಕೆ ಜಾಕ್ ಮಂಜು ಅವರು ಬಂಡವಾಳ ಹೂಡಿದ್ದಾರೆ.. ಅಭಿನಯ ಚಕ್ರವರ್ತಿ ಸುದೀಪ್ ಅವರ ಈ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸುಮಾರು 6 ಕೋಟಿ ಹಣ ಖರ್ಚು ಮಾಡಿ ಕಾಡಿನ ಸೆಟ್ ನಿರ್ಮಿಸಲಾಗಿತ್ತು.. ಅದಕ್ಕಾಗಿ ರಾಜಮಂಡ್ರಿ ಹಾಗೂ ಮುಂತಾದ ಕಡೆಗಳಿಂದ ವಿವಿಧ ಬಗೆಯ ಗಿಡಗಳನ್ನ ತರಿಸಲಾಗಿತ್ತು,. ಜೊತೆಗೆ ಕೆಲವನ್ನ ಕಲಾತಂಡ ಕೂಡ ಸೃಷ್ಟಿ ಮಾಡಿತ್ತು.. ಸೆಟ್ ಕೆಲಸ ಪೂರ್ಣಗೊಂಡ ಬಳಿಕ ಇಡೀ ಚಿತ್ರತಂಡ ಹೈದರಾಬಾದ್ ಗೆ ತೆರಳಿ ಚಿತ್ರೀರಣವನ್ನ ಪುನರ್ ಆರಂಭಿಸಲು ಪ್ಲಾನ್ ಮಾಡಿಕೊಂಡಿತ್ತು.. ಆದ್ರೆ ಮಹಾಮಾರಿ ಕೊರೋನಾ ಕಾಟದಿಂದಾಗಿ ಸದ್ಯ ಆ ಪ್ಲಾನ್ ಎಲ್ಲವೂ ತಲೆಕೆಳಗಾಗಿದೆ.. ಸ್ಯಾಂಡಲ್ ವುಡ್ ನ್ಲಲಿ ಸಾಕಷ್ಟು ಕುತೂಹಲ ಗರಿಗೆದರುವಂತೆ ಮಾಡಿರುವ ಕಿಚ್ಚನ ಫ್ಯಾಂಟಮ್ ಚಿತ್ರದ ಶೂಟಿಂಗ್ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ..

ಚಂದನ, ಸಿನಿಮಾ ಬ್ಯುರೋ, ಕರ್ನಾಟಕ ಟಿವಿ

- Advertisement -

Latest Posts

Don't Miss