Tuesday, April 15, 2025

Latest Posts

BIGG BOSS : ಬಿಗ್ ಬಾಸ್ ಮನೇಲಿ ಮತ್ತೆ ವಾರ್ , ರೊಚ್ಚಿಗೆದ್ದ ರಜತ್‌-ಮಂಜು

- Advertisement -

ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ ಆರ್ಭಟ ದಿನೇ ದಿನೇ ಜೋರಾಗ್ತಿದೆ. ಸದ್ಯ ರಜತ್‌ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ. ಮಂಜು ಹಾಗೂ ರಜತ್‌ ನಡುವೆ ಜೋರು ಗಲಾಟೆ ಶುರುವಾಗಿದೆ.

ಹೌದು ಬಿಗ್ ಬಾಸ್ ಚೆಂಡು ಸಾಗಲಿ ಮುಂದೆ ಹೋಗಲಿ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಚೈತ್ರಾ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ ಚೈತ್ರಾ ಹಾಗೂ ರಜತ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್‌ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್‌ ಅವರ ಬಗ್ಗೆಯೂ ಮಂಜು ಮಾತನಾಡಿದ್ದಾರೆ. ಈ ವೇಳೆ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.

 

ಕಳೆದ ವಾರ ಧನರಾಜ್‌ ಹಾಗೂ ರಜತ್‌ ಅವರ ಜಗಳದ ವಿಚಾರವಾಗಿ ಸುದೀಪ್‌ ಅವರು ವಾರ್ನ್‌ ಮಾಡಿ ಪನಿಶ್‌ಮೆಂಟ್‌ ಕೂಡ ನೀಡಿದ್ದರು. ಆದರೂ ರಜತ್‌ ಅವರು ಸರಿ ಹೋದಂತೆ ಇಲ್ಲ. ಇದೀಗ ಮತ್ತೆ ಮಂಜು ಹಾಗೂ ರಜತ್‌ ಅವರ ನಡುವೆ ಮಾರಾಮಾರಿಯಾಗಿದೆ.

ಈ ವಾರ ರಜತ್‌ ನಾಮಿನೇಟಗಗ ಕೂಡ ಆಗಿದ್ದಾರೆ. ಹೀಗಾಗಿ ಕಿಚ್ಚ ಅವರು ರಜತ್‌ಗೆ ಸ್ಪೆಷಲ್‌ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ಪ್ರೇಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಆಗಾಗ ರಜತ್‌ ಅವರು ಚೈತ್ರಾ ಕುಂದಾಪುರ ಅವರ ಕಾಲೆಳೆಯುವ, ರೇಗಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ ಜೋರಾಗಿ ಕೂಗಾಡಿದ್ದಾರೆ.ಒಂದು ಟಾಸ್ಕ್‌ ಬಿಗ್‌ ಬಾಸ್‌ ನೀಡಿತ್ತು. ತಮ್ಮೊಳಗೆ ಚರ್ಚಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್‌ ಮಾಡಬೇಕಿತ್ತು. ರಜತ್‌ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ ತ್ರಿವಿಕ್ರಮ್‌ ತಂಡ.

ಇಲ್ಲಿ ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರವೋಕ್‌ ಮಾಡುತ್ತಾರೆ. ಅವರನ್ನೇ ಅವರು ಮೇಲು ಅಂದುಕೊಂಡಿದ್ದಾರೆ ಎಂದು ತ್ರಿವಿಕ್ರಮ್‌ ಕಾರಣ ಕೊಟ್ಟರು. ಅದಕ್ಕೆ ರಜತ್‌ ಅವರು ನಾನೇ ಹೀರೋ, ನಾನೇ ಕರಾಬು, ನಾಮಿನೇಟ್‌ ಮಾಡಿ ಬಿಟ್ರೆ ಚೇಂಜ್‌ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಎಂದು ಅಬ್ಬರಿಸಿದ್ದಾರೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಸಂಖ್ಯೆ 10ಕ್ಕೆ ಇಳಿಕೆ ಆಗಿದೆ. ಸ್ಪರ್ಧಿಗಳ ಮಧ್ಯೆ ಆಟ ಜೋರಾಗಿದೆ. ಕಳೆದ ವಾರ ಶಿಶಿರ್ ದೊಡ್ಮನೆಯಿಂದ ಔಟ್ ಆಗಿದ್ದರು.ಇಡೀ ಮನೆಯಲ್ಲಿ ಕ್ಲೀನ್ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ನಿಭಾಯಿಸುವ ವೇಳೆ ಗೌತಮಿ ಜಾದವ್ ಮತ್ತು ರಜತ್ ನಡುವೆ ಜಗಳ ಆರಂಭ ಆಯಿತುತಾವು ಹಣ್ಣು ತಿನ್ನುವುದನ್ನು ಗೌತಮಿ ಜಾದವ್ ಟೀಕಿಸಿದ್ದಕ್ಕೆ ರಜತ್ ಅವರಿಗೆ ಕೋಪ ಬಂತು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

- Advertisement -

Latest Posts

Don't Miss