Hubli News: ಹುಬ್ಬಳ್ಳಿ: ಕರ್ನಾಟಕ ಅಭಿವೃದ್ದಿ ಸೇರಿದಂತೆ ಎಲ್ಲ ರಾಜ್ಯಗಳ ಹಿತಾಸಕ್ತಿ ಕಾಪಾಡುವುದಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ. ರಾಜ್ಯ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಹಾಕುವ ಉದ್ದೇಶದಿಂದ ಕೇಂದ್ರದ ಮೇಲೆ ಆರೋಪ ಮಾಡುತ್ತೆ. ರಾಜ್ಯ ಸರ್ಕಾರದ ಗ್ಯಾರಂಟಿ ವಿಚಾರದಲ್ಲಿ ಹಲವಾರು ನ್ಯೂನತೆಗಳಿವೆ.
ತಮ್ಮ ನ್ಯೂನತೆಗಳನ್ನ ಕೇಂದ್ರದ ಮೇಲೆ ಹಾಕುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಡಿ ಕಾರಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕರ್ನಾಟಕದಿಂದ ಯಾವುದೇ ಅಧಿಕಾರಿಗಳು ಬಂದರೂ ಅವರಿಗೆ ನಾವು ಸ್ಪಂದನೆ ನೀಡುತ್ತೇವೆ. ತಮ್ಮ ತಪ್ಪುಗಳಿಂದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ.
ರೈಲ್ವೇ ಯೋಜನೆ ಹಿನ್ನೆಲೆ ಭೂಸ್ವಾದೀನ ಮಾಡುವ ಅವಶ್ಯಕತೆ ಇದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಹಲವು ವಿಚಾರ ಕುರಿತು ಸಲಹೆ ನೀಡಲಾಗಿತ್ತು.
ಆದ್ರೆ ರಾಜ್ಯ ಸರ್ಕಾರ ಸುಳ್ಳು ಹೇಳುವ ಮೂಲಕ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ. ಇತಿಹಾಸದಲ್ಲೇ ನಾವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಸಾಕಷ್ಟು ಅನುದಾನ ಕೊಡಲಾಗಿದೆ. ಈವರೆಗೂ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಸರ್ಕಾರಕ್ಕೆ ಯಾವುದೇ ಜಗಳ ಮಾಡುವ ಉದ್ದೇಶವಿಲ್ಲ ಎಂದು ರಾಜ್ಯ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದ ಜೋಶಿ.
ಸಮಗ್ರ ಅಭಿವೃದ್ದಿಯೇ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ. ಧಾರವಾಡ ಜಿಲ್ಲೆಯಲ್ಲೇ ಕೆಲವೊಂದಿಷ್ಟು ಪ್ರಾಜೆಕ್ಟ್ ಗಳನ್ನ ರಾಜ್ಯ ಸರ್ಕಾರ ಕೈಬಿಟ್ಟಿದೆ. ಕರ್ನಾಟಕ ರಾಜ್ಯದ ನೆಲ, ಜಲ, ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಸುಳ್ಳುಹೇಳಿ ರಾಜಕೀಯ ಮಾಡುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೆ ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ರಾಜ್ಯ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ದಿ ಬಗ್ಗೆ ಯೋಚನೆ ಮಾಡಲಿ ಎಂದರು.
ಧಾರವಾಡ ಪ್ರವೇಶಕ್ಕೆ ಮತ್ತೆ ಅನುಮತಿ ಕೋರಿದ್ದ ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ
ಲಾಡ್ ಗೆ ಮಾತಿನಲ್ಲೇ ಪ್ರಹ್ಲಾದ ಜೋಶಿ ಲಾಟಿ ಚಾರ್ಜ್: ಕಾಂಗ್ರೆಸ್ ವಿರುದ್ಧ ಕಿಡಿ..!