Hubli News: ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಒಂದು ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ನ್ನು, ಬಸ್ಸಿನಲ್ಲೇ ಬಿಟ್ಟು ಇಳಿದು ನಂತರ ಗಾಬರಿಗೊಂಡು ಕೂಡಲೇ BRTS ಸಹಾಯವಾಣಿಗೆ ಸಂಪರ್ಕಿಸಿದಾಗ, ಆ ಬಸ್ ಚಾಲಕ ಆ ಬ್ಯಾಗನ್ನು ನೋಡಿ ಕಚೇರಿಗೆ ತಂದು ಪ್ರಯಾಣಿಕರಿಗೆ ಮರಳಿಸಿ ತಮ್ಮ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗುರುನಾಥ ಬಡಿಗೇರ ಎಂಬುವವರು ಸವದತ್ತಿಯ ಹೂಲಿ ಗ್ರಾಮದ ನಿವಾಸಿ, ಧಾರವಾಡದ ಹೊಸ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಚಿಗರಿ ಬಸ್ ಹತ್ತಿದ್ದಾರೆ. ತದನಂತರ ತಮ್ಮ ನಿಲ್ದಾಣಕ್ಕೆ ಬಂದು ಇಳಿದಾಗ ತಮ್ಮ ಬಳಿ ಇದ್ದ ಹಣದ ಬ್ಯಾಗನ್ನು ಅಲ್ಲೆ ಬಿಟ್ಟು ಇಳಿದಿದ್ದಾರೆ.
ಕೂಡಲೇ ಬಿಆರ್‌ಟಿಎಸ್ ಸಹಾಯವಾಣಿಗೆ ಸಂಪರ್ಕಿಸಿದಾಗ ಅಧಿಕಾರಿ ಎಮ್.ಜೆ ಕಿಲ್ಲೆದಾರ ಅವರು ಆ ವಾಹನದ ಚಾಲಕ M.N ಮಿರ್ಜನವರನ್ನ ಸಂಪರ್ಕಿಸಿ ವಿಷಯ ತಿಳಿಸಿದಾಗ ಬ್ಯಾಗ್ ಅಲ್ಲೆ ಇತ್ತು. ಕೂಡಲೆ ಅದನ್ನು ತೆಗೆದುಕೊಂಡು ಕಚೇರಿಗೆ ಹೋಗಿ ಪ್ರಯಾಣಿಕರಿಗೆ ಮರಳಿಸಿದ್ದಾರೆ. ಇದಕ್ಕೆ ಎಲ್ಲ ಅಧಿಕಾರಿಗಳಿಗೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ ಪ್ರಯಾಣಿಕ ಗುರುನಾಥ ಬಡಿಗೇರ.
ಸಂಗಮೇಶ್ ಶೆಟ್ಟಿಗಾರ್, ಕಿತ್ತೂರು ಕರ್ನಾಟಕ ಬ್ಯೂರೋ ಮುಖ್ಯಸ್ಥರು




