ಡೆಲ್ಟಾ ಪ್ಲಸ್ ಸೋಂಕಿತರಲ್ಲಿ ಒಬ್ಬರು ಗುಣಮುಖ- ಸುಧಾಕರ್ ಮಾಹಿತಿ

www.karnatakatv.net:ರಾಜ್ಯ- ಬೆಂಗಳೂರು: ಡೆಲ್ಟಾ ಪ್ಲಸ್ ವೈರಸ್ ನಿಂದ ಒಬ್ಬರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಮೈಸೂರಿನ ಡೆಲ್ಟಾ ಪ್ಲಸ್ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಸೋಂಕಿತನ ಸಂಪರ್ಕಿತರಿಗೂ ಹರಡಿಲ್ಲ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಸುಧಾಕರ್ ಬೆಂಗಳೂರಿನಲ್ಲಿರುವ ಮತ್ತೊಬ್ಬರಿಗೂ ಚಿಕಿತ್ಸೆ ನೀಡಲಾಗ್ತಿದೆ, ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ರು.

About The Author