Banglore News: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಆಪ್ ನಿಂದ ಸಾಲ ಪಡೆದು ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 22 ವರ್ಷದ ತೇಜಸ್ ಮೃತ ವಿದ್ಯಾರ್ಥಿಯಾಗಿದ್ದಾನೆ.
ಸ್ನೇಹಿತ ಮಹೇಶ್ ಎಂಬಾತನಿಗೆ ಆಪ್ ಮೂಲಕ ತೇಜಸ್ ಲೋನ್ ಪಡೆದಿದ್ದ. ಆದರೆ ಯಾವುದೇ ಇಎಂಐ ನ್ನು ಮಹೇಶ್ ಒಂದು ವರ್ಷದಿಂದಲೂ ಕಟ್ಟಿರಲಿಲ್ಲ. ಸಾಧಾರಣ 30 ಸಾವಿರದ ವರೆಗೆ ಸಾಲ ಪಡೆದಿದ್ದ ಎಂಬುವುದು ತಿಳಿದು ಬಂದಿದೆ. ಆಪ್ ನವರು ನಿರಂತರ ಕಿರುಕುಳ ನೀಡಿದ್ದು ತನ್ನ ನಗ್ನ ಫೋಟೋವನ್ನು ಸಂಬಂಧಿಕರಿಗೆ ಬಹಿರಂಗ ಪಡಿಸುವುದಾಗಿ ಬೆದರಿಕೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಇದೆ.
ತೇಜಸ್ ತನ್ನ ಸ್ವಗೃಹದಲ್ಲಿ ತಾಯಿಯ ವೇಲ್ ನಿಂದ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Hareesh Acharya : ಖ್ಯಾತ ವಕೀಲರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
Free Bus : ಹೆಸರು ಲಕ್ಷ್ಮೀ …!ಲಿಂಗ ಪುರುಷ..?! ಕಂಡಕ್ಟರ್ ಕಕ್ಕಾಬಿಕ್ಕಿ..!