Friday, August 29, 2025

Latest Posts

ಆನ್‌ಲೈನ್‌ ಬೆಟ್ಟಿಂಗ್‌, ಗೇಮಿಂಗ್‌ ಬ್ಯಾನ್ – ಗೇಮ್ ಆಡಿಸಿದ್ರೆ ಜೈಲು ಫಿಕ್ಸ್!!

- Advertisement -

ಇನ್ಮುಂದೆ ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್‌ಗಳು ಬ್ಯಾನ್ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಆನ್‌ಲೈನ್ ಗೇಮಿಂಗ್‌ ನಿಂದ ಹಾಳಾಗ್ತಿದ್ದಾರೆ. ಆನ್‌ಲೈನ್ ಗೇಮಿಂಗ್‌ ಅನ್ನೋದು ದೇಶದ ಪ್ರಮುಖ ಸಮಾಜಪರ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ದೇಶದಾದ್ಯಾಂತ ಸುಮಾರು 45 ಕೋಟಿ ಮಂದಿ ಪ್ರತಿ ವರ್ಷ ಒಟ್ಟು ₹20,000 ಕೋಟಿ ನಷ್ಟವನ್ನು ಅನುಭವಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಅಂದಾಜಿಸಿದೆ.

ಈ ಆತಂಕಕಾರಿ ಅಂಕಿ ಅಂಶಗಳು ಲೋಕಸಭೆಯಲ್ಲಿ ಬುಧವಾರ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ ಮಂಡನೆಯ ಸಂದರ್ಭದಲ್ಲಿ ಹೊರಬಿದ್ದಿವೆ. ಉನ್ನತ ಮೂಲಗಳ ಪ್ರಕಾರ, ಈ ಗೇಮಿಂಗ್‌ಗಳಿಂದ ಆದಾಯಕ್ಕೂ ಹೆಚ್ಚು ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂಬ ನಿಲುವಿನಲ್ಲಿ ಸರ್ಕಾರ ಗಂಭೀರವಾಗಿ ನಿಷೇಧದತ್ತ ಹೆಜ್ಜೆ ಹಾಕುತ್ತಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಲೋಕಸಭೆಯಲ್ಲಿ ಮಂಡಿಸಿದ ‘ಆನ್‌ಲೈನ್‌ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ವಿಧೇಯಕ – 2025’ ಜಾಹೀರಾತುಗಳನ್ನು ನಿಷೇಧಿಸುತ್ತದೆ. ಬ್ಯಾಂಕ್‌ ಇಲ್ಲವೇ ಹಣಕಾಸು ಸಂಸ್ಥೆಗಳು ಹಣ ವರ್ಗಾವಣೆ ಮಾಡುವುದನ್ನು ನಿರ್ಬಂಧಿಸುತ್ತದೆ. ಪೋಕರ್‌, ರಮ್ಮಿ ಮತ್ತು ಇತರೆ ಕಾರ್ಡ್‌ ಆಟ, ಆನ್‌ಲೈನ್‌ ಲಾಟರಿ, ಬೆಟ್ಟಿಂಗ್‌, ಜೂಜುಗಳಿಗೂ ಕಡಿವಾಣ ಹಾಕುತ್ತದೆ. ದೋಷಿಗಳಿಗೆ 3 ವರ್ಷದ ತನಕ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ.ವರೆಗೆ ದಂಡ ವಿಧಿಸಬಹುದು.

ಆನ್‌ಲೈನ್‌ ಗೇಮಿಂಗ್‌ ನಿಷೇಧದಿಂದ ಸುಮಾರು ಕಂಪನಿಗಳ 2 ಲಕ್ಷ ಉದ್ಯೋಗಗಳು, 25,000 ಕೋಟಿ ರೂ.ಗಳ ಹೂಡಿಕೆ ಮತ್ತು ವಾರ್ಷಿಕ 20,000 ಕೋಟಿ ರೂ.ಗಳ ಜಿಎಸ್‌ಟಿ ಸಂಗ್ರಹಕ್ಕೆ ಕುತ್ತಾಗುತ್ತದೆ ಎಂದು ಮಾಧ್ಯಮ ವರದಿಯೊಂದು ಅಂದಾಜಿಸಿದೆ.

- Advertisement -

Latest Posts

Don't Miss