Wednesday, October 29, 2025

Latest Posts

ಉಚ್ಛಾಟನೆ ಆದವರೇ ಸಿಎಂ ಆಗ್ತಾರೆ..

- Advertisement -

2028ರ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಬಾಕಿ ಇವೆ. ಹೀಗಲೇ ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ. ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಹಲವು ರಾಜಕೀಯ ನಾಯಕರು ಭವಿಷ್ಯವನ್ನೂ ನುಡಿದಿದ್ದಾರೆ. ಇನ್ನು, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, 2028ಕ್ಕೆ ನಾನೇ ಸಿಎಂ ಅಂತಾ ಪದೇ ಪದೇ ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದಾರೆ.

ಸೆಪ್ಟೆಂಬರ್‌ 5ರಂದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಗಣೇಶೋತ್ಸವದ ಧರ್ಮ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗಿದ್ರು. ಈ ವೇಳೆ ಮಾತನಾಡುತ್ತಾ, ಯಡಿಯೂರಪ್ಪ ಅವರನ್ನೂ ಉಚ್ಛಾಟಿಸಲಾಗಿತ್ತು. ಬಳಿಕ ಸಿಎಂ ಆದ್ರು. ಒಮ್ಮೆ ಕುಮಾರಸ್ವಾಮಿಯನ್ನು ಉಚ್ಛಾಟಿಸಲಾಗಿತ್ತು, ಅವರೂ ಸಿಎಂ ಆದರು. ಈಗ ನನ್ನ ಸರದಿ ನನ್ನನ್ನೂ ಉಚ್ಛಾಟಿಸಲಾಗಿದೆ. 2028ಕ್ಕೆ ಸಿಎಂ ಆಗ್ತೀನೇನೋ ನೋಡಬೇಕು ಅಂತಾ ಹೇಳಿದ್ರು. ಯತ್ನಾಳ್‌ ಮಾತಿಗೆ ಶಿಳ್ಳೆ, ಚಪ್ಪಾಳೆ ಹಾಕಿದ ಜನ್ರು, ನೀವು ಸಿಎಂ ಆಗೋದು ಫಿಕ್ಸ್ ಎಂದು ಜೋರಾಗಿ ಕೂಗಿದ್ರು.

ಬಿಜೆಪಿಯಿಂದ ಉಚ್ಛಾಟನೆ ಆದ ನಂತರ ಬಹಳ ಪಾಪ್ಯುಲರ್ ಆಗಿದ್ದೀರಿ ಎಂದು ಜನರು ಹೇಳುತ್ತಾರೆ. ನಿಜ ಅಂದ್ರೆ ನಮ್ಮವರು ನಾನು ಪಾಪ್ಯುಲರ್ ಆಗಲಿ ಅಂತಾನೆ ಉಚ್ಚಾಟನೆ ಮಾಡಿದ್ದಾರೆ.ರಾಜ್ಯದಲ್ಲಿ ಗೃಹ ಇಲಾಖೆ ಆಳುವ ಮಂತ್ರಿ ಅಷ್ಟೇನೂ ಸಮರ್ಥರಲ್ಲ. ರಾಜ್ಯದಲ್ಲಿ ಇಂಟಲಿಜೆನ್ಸಿ ಸತ್ತು ಹೋಗಿದೆ. ರಾಜ್ಯದಲ್ಲಿ ಧರ್ಮಸ್ಥಳ ಸಮೀರನ ಸರ್ಕಾರವಿದೆ.

ನಮ್ಮವರು ಅಡ್ಜಸ್ಟ್ಮೆಂಟ್ ಬಿಟ್ಟು ಧರ್ಮ ಉಳಿಸಲು ಒಂದಾಗಬೇಕು. ಸನಾತನ ಧರ್ಮವನ್ನು ಅಪವಿತ್ರ ಮಾಡುವವರನ್ನು, ಧರ್ಮವನ್ನು ಅವಹೇಳನ ಮಾಡುವವರ ವಿರುದ್ಧ ಹೋರಾಟ ನಿಶ್ಚಿತ. ರಾಜ್ಯದಲ್ಲಿ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತ ನಾಯಕತ್ವ ಬೇಕಿದೆ. ಧರ್ಮಸ್ಥಳದ ಸಮೀರ್‌ಗೆ ಗುಡ್ ಎಂದು ಲೈಕ್ ಕೊಟ್ಟವರು ನಮ್ಮವರೇ. ಗಣಪತಿ ಉತ್ಸವಕ್ಕೆ ನೂರಾರು ಕಂಡೀಷನ್ ಹಾಕ್ತಾರೆ. ಆದರೆ, ದಿನಕ್ಕೆ ಐದು ಭಾರಿ ಮೈಕ್ ಹಾಕುವವರಿಗೆ ಏನೂ ಅನ್ನಲ್ಲ. ನಾನು ಮುಸ್ಲಿಂ ವಿರೋಧಿಯಲ್ಲ. ಆದರೆ, ನಮ್ಮ ದೇಶದ ಅನ್ನ ನೀರು ಸೇವಿಸಿ, ಪಾಕಿಸ್ತಾನಕ್ಕೆ ಜೈ ಎನ್ನುವಂತಹ ದೇಶದ್ರೋಹಿಗಳನ್ನು ವಿರೋಧಿಸುತ್ತೇನೆ ಅಂತಾ, ಯತ್ನಾಳ್‌ ಗುಡುಗಿದ್ದಾರೆ.

- Advertisement -

Latest Posts

Don't Miss