Wednesday, April 16, 2025

Latest Posts

ಅಕ್ರಮ ಸ್ಫೋಟಕಗಳ ವಿರುದ್ಧ ಶೀಘ್ರದಲ್ಲಿ ಕಾರ್ಯಾಚರಣೆ ; ಗೃಹ ಸಚಿವ ಬೊಮ್ಮಯಿ

- Advertisement -

ದಾವಣಗೆರೆ : ರಾಜ್ಯದಲ್ಲಿನ ಸ್ಫೋಟಕಗಳನ್ನು ಪತ್ತೆ ಹಚ್ಚಲು ಎಲ್ಲಾ ಗಣಿಗಾರಿಕೆ ಕೇಂದ್ರಗಳ ಮೇಲೆ ವಿಶೇಷ ಕಾರ್ಯಾಚರಣೆ ಮಾಡಿ ಒಟ್ಟಾರೆ ಸ್ಪೋಟಕಗಳ ಆಡಿಟ್ ಮಾಡಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ದಾವಣಗೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಣಿ ಮತ್ತು ಗೃಹ ಇಲಾಖೆ ಅಧಿಕಾರಿಗಳ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆ ಮಾಡಲಿವೆ. ರಾಜ್ಯದಲ್ಲಿನ ಹಲವಾರು ಗಣಿಗಾರಿಕೆ ಕೇಂದ್ರಗಳಿವೆ. ಅವುಗಳ ಪೈಕಿ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆ ಕೇಂದ್ರಗಳೂ ಇವೆ. ಈ ಎಲ್ಲಾ ಗಣಿಗಾರಿಕೆ ಕೇಂದ್ರಗಳ ವಿರುದ್ಧ ಜಂಟಿ ಕಾರ್ಯಾಚರಣೆ ಆರಂಭ ಮಾಡುತ್ತೇವೆ ಎಂದರು.

ಇದುವರೆಗೆ 3 ತಿಂಗಳಿಗೆ ಒಮ್ಮೆ ಗಣಿಗಾರಿಕೆ ಕೇಂದ್ರಗಳನ್ನು ತಪಾಸಣೆ ಮಾಡಲಾಗುತ್ತಿತ್ತು. ಈಗ ಆ ನಿಯಮವನ್ನು ಕಠಿಣಗೊಳಿಸಲಾಗಿದೆ. ಈ ಸಂಬಂಧ ವಿಶೇಷ ಸುತ್ತೋಲೆ ಹೊರಡಿಸಲಾಗಿದೆ. ಇನ್ನು ಮುಂದೆ 15 ದಿನಗಳಿಂದ 1 ತಿಂಗಳ ಅವಧಿಯಲ್ಲಿ ಒಂದು ಬಾರಿ ರಾಜ್ಯದ ಎಲ್ಲ ಗಣಿಗಾರಿಕೆ ಕೇಂದ್ರಗಳನ್ನು ತಪಾಸಣೆ ಮಾಡುತ್ತೇವೆ. ಅಲ್ಲಿ ಸಂಗ್ರಹಿಸಿರುವ ಸ್ಫೋಟಕಗಳನ್ನು ಪತ್ತೆ ಮಾಡುತ್ತೇವೆ. ಅಕ್ರಮ- ಸಕ್ರಮ ಸ್ಪೋಟಕಗಳನ್ನು ಪತ್ತೆ ಮಾಡುತ್ತೇವೆ. ಅಕ್ರಮವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಒಟ್ಟರೆ ರಾಜ್ಯದಲ್ಲಿ ಎಕ್ಸ್ ಪ್ಲೋಸಿವ್ ಗಳ ಆಡಿಟ್ ಮಾಡುತ್ತೇವೆ. ಈ ಜಂಟಿ ಕಾರ್ಯಾಚರಣೆ ಬಗ್ಗೆ ಗಣಿ ಸಚಿವ ಮುರುಗೇಶ ನಿರಾಣಿ ಜತೆ ಚರ್ಚಿಚಿಸಲಾಗಿದೆ ಎಂದು ಹೇಳಿದ ಬಸವರಾಜ ಬೊಮ್ಮಾಯಿ.

- Advertisement -

Latest Posts

Don't Miss