Friday, December 5, 2025

Latest Posts

ಆಪರೇಶನ್ ಕಮಲವಾಗದೇ ಕಾಂಗ್ರೆಸ್ ಸರ್ಕಾರದ ಅಂತ್ಯವಾಗಲಿದೆ: ಮಹೇಶ್ ಟೆಂಗಿನಕಾಯಿ

- Advertisement -

Hubli Political News: ಧಾರವಾಡದಲ್ಲಿ, ಭುವನೇಶ್ವರಿ ತಾಯಿ ರಥೋತ್ಸವಕ್ಕೆ ಹುಬ್ಬಳ್ಳಿ ಧಾರವಾಡ ಕೇಂದ್ರ ಶಾಸಕ ಮಹೇಶ್ ಟೆಂಗಿನಕಾಯಿ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ ಮಾಡಿರುವ ಕಾರ್ಯಕ್ರಮವಾಗಿದ್ದು, ಕನ್ನಡ ನಾಡು ನುಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ಮಾಡಲಿರುವ ರಥ. ಇಂದು ಧಾರವಾಡ ಜಿಲ್ಲೆಯಲ್ಲಿ ಸಂಚಾರ ಆರಂಭಿಸಿದೆ.  ಸ್ಥಳೀಯ ಜಾನಪದ ಕಲಾವಿದರು, ಮಕ್ಕಳು ಮತ್ತು ಕನ್ನಡಪರ ಸಂಘಟನೆಗಳು ಭಾಗಿಯಾಗಿದ್ದರು.

ಇನ್ನು ಈ ವೇಳೆ ಮಾತನಾಡಿದ ಟೆಂಗಿನಕಾಯಿ,  ರಾಜ್ಯ ಸರ್ಕಾರದ 50 ನೇ ವರ್ಷ ಸಂಭ್ರಮಾಚರಣೆಯ ರಥೋತ್ಸವ ಬಂದಿದೆ. ಕನ್ನಡ ನಾಡು ನುಡಿ ಉಳಿಸುವ ನಿಟ್ಟಿನಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕಲಾವಿದರ ಮೂಲಕ ಕನ್ನಡ ಬಿಂಬಿಸುವ ಕೆಲಸ ಆಗುತ್ತಿದೆ. ಬೇರೆ ಭಾಷೆಗಳ ಬೋರ್ಡ್ ತೆರವು ಕಾರ್ಯ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಸರ್ಕಾರವೂ ಸಹ ಈ ಬಗ್ಗೆ ಗಮನಹರಿಸುವ ಬಗ್ಗೆ ಭರವಸೆ ನೀಡಿತ್ತು. ಆದರೆ ಇದು ಬರೀ ಫೈಲ್ ಆಗಿ ಉಳಿಯ ಬಾರದು. ಅಧಿಕಾರಿಗಳ ಮೂಲಕ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಸ್ಥಳೀಯ ಜನಪ್ರತಿನಿಧಿಗಳಿಂದ ಏನು ಸಹಕಾರ ಬೇಕಾದ್ರೂ ನೀಡಲು ಸಿದ್ಧ ಎಂದಿದ್ದಾರೆ.

ಕಾದು ನೋಡಿ ರಾಜ್ಯದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಕಾಂಗ್ರೆಸ್ ಸರ್ಕಾರ ಬೆಳಗಾವಿಯಿಂದಲೇ ಆರಂಭಗೊಂಡು ಮತ್ತೆ ಬೆಳಗಾವಿಯಿಂದಲೇ ಅಂತ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರ ಕೆಡವಲು ನಾವು ಆಪರೇಷನ್ ಕಮಲ ಬೇಕಿಲ್ಲ ತನ್ನಷ್ಟಕ್ಕೆ ತಾನೆ ಬಿಳುತ್ತದೆ. ವಯಕ್ತಿಕ ಹಿತಾಸಕ್ತಿಯಿಂದ ಆಂತರಿಕ ಕಚ್ಚಾಟ ಉಂಟಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ ಸೇರಿ ಮನೆಯೊಂದು ಮೂರು ಬಾಗಿಲು ಆಗಿದೆ. ಪ್ರತಿಯೊಬ್ಬರು ಭಿನ್ನಾಭಿಪ್ರಾಯ ಹೇಳಿಕೆ ನೀಡುತ್ತಿದ್ದಾರೆ. ಇದು ಬಹುದೊಡ್ಡ ತಿರುವು ಪಡೆದುಕೊಳ್ಳಲಿದೆ ಎಂದು ಟೆಂಗಿನಕಾಯಿ ಹೊಸ ಬಾಂಬ್ ಸಿಡಿಸಿದ್ದಾರೆ.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ ಟೆಂಗಿನಕಾಯಿ,  ಇದು ಬಹಳಷ್ಟು ಭಂಡವಾದ ಸರ್ಕಾರದ. ಇಡೀ ದೇಶದಲ್ಲಿಯೇ ಜನರ ಬಗ್ಗೆ ಕರುಣೆ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ. ಮಾಡಿದ್ದೆ ಆಟ ಓಡಿದ್ದೆ ಓಟ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ ಇದು ಸರಿಯಲ್ಲ. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನರಿಗೆ ಅರ್ಥ ಆಗಿದೆ ಹಿಗಾಗಿ ಜನ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಶಾಸಕರೇ ನೆಗೆಟಿವ್ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಮರಿಚಿಕೆ ಆಗಿದೆ ಯಾವುದಕ್ಕೂ ಹಣ ಇಲ್ಲ. ನೀವು ನೀಡಲು ತೀರ್ಮಾನಿಸಿರುವ ಐದಾರು ಕೋಟಿ ಅನುದಾನದಲ್ಲಿ ಒಂದು ಒಳಚರಂಡಿ ನಿರ್ಮಾಣ ಮಾಡಲು ಆಗುವುದಿಲ್ಲ. ಇದರಿಂದ ಊರು ಉದ್ಧಾರ ಆಗಲ್ಲ. ನಾವು ಗ್ಯಾರಂಟಿ ವಿರೋಧಗಳಲ್ಲಾ ಆದರೆ ನೀವು ಮಾಡಿದ್ದು ಸರಿನಾ? ಮನದಟ್ಟು ಮಾಡಿಕೊಳ್ಳಿ. ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಾಪಸು ಪಡೆಯಬೇಕು. ಇಲ್ಲದಿದ್ದರೆ ನಾಳೆ ರಸ್ತೆ ತಡೆ ಹೋರಾಟ ಮಾಡುತ್ತವೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

- Advertisement -

Latest Posts

Don't Miss