Tuesday, September 23, 2025

Latest Posts

ದಸರಾ ಫಲ-ಪುಷ್ಪ ಪ್ರದರ್ಶನದಲ್ಲಿ ಆಪರೇಷನ್‌ ಸಿಂಧೂರ !

- Advertisement -

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ, ಹಾರ್ಡಿಂಗ್ ವೃತ್ತದ ಕುಪ್ಪಣ್ಣ ಉದ್ಯಾನದಲ್ಲಿ ನಡೆಯುವ ಫಲ-ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ‘ಅಪರೇಷನ್ ಸಿಂಧೂರ’ ವಿಶೇಷ ಗಮನಸೆಳೆಯಲಿದೆ. ದೇಶದ ಮೇಲೆ ಶತ್ರುಗಳಿಂದ ಹೋರಾಡಿ ಕೀರ್ತಿಗಾನ ಪಡೆದ ಸೈನಿಕರಿಗೆ ಗೌರವ ಸೂಚಿಸುವ ಉದ್ದೇಶದಿಂದ, ಕರ್ನಲ್ ಸೋಫಿಯಾ ಮತ್ತು ವೋಮಿಕಾ ಸಿಂಗ್ ಅವರ ಪ್ರತಿಕೃತಿಗಳನ್ನು ಪುಷ್ಪಗಳಿಂದ ಸಿಂಗರಿಸಲಾಗುತ್ತಿದೆ. ಆರ್ಮಿ ಟ್ರಕ್, ಏರ್‌ಜೆಟ್ ಹಾಗೂ ಯುದ್ಧ ನೌಕೆಯ ಮಾದರಿಗಳೂ ರೂಪುಗೊಳ್ಳುತ್ತಿವೆ. ಇದಕ್ಕಾಗಿ ಗುಲಾಬಿ, ಸೇವಂತಿಗೆ ಮೊದಲಾದ ಹೂವುಗಳು ಬಳಸಲಾಗುತ್ತಿವೆ.

ದಸರಾ ಉದ್ಘಾಟನೆಯ ದಿನವೇ, ಸೆ. 22ರಿಂದ ಫಲ-ಪುಷ್ಪಗಳ ವಿಶಿಷ್ಟ ಲೋಕವನ್ನು ಜನರ ಮುಂದಕ್ಕೆ ತರುವ ನಿರೀಕ್ಷೆಯಿದೆ. ಪ್ರತಿದಿನ ಸುಮಾರು 40–50 ಸಾವಿರ ಮಂದಿಯ ಪಾಲ್ಗೊಳ್ಳುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ವಿಜಯದಶಮಿ ಮೆರವಣಿಗೆ ಗಾಂಧಿ ಜಯಂತಿ ದಿನವಾದ ಅ.2ರಂದು ನಡೆಯಲಿದೆ. ರಾಷ್ಟ್ರಪಿತನಿಗೆ ಅರ್ಪಿಸುವ ವಿಶೇಷ ಹೂವು ಕಲಾಕೃತಿಗಳ ಘಮವನ್ನು ಈ ಸಂದರ್ಭದಲ್ಲಿ ಜನರು ನೋಡಬಹುದಾಗಿದೆ. ಕನ್ಯಾಕುಮಾರಿಯ ಗಾಂಧೀಜಿ ಸ್ಮಾರಕ ಮ್ಯೂಸಿಯಂನ್ನು ಗಾಜಿನ ಮನೆಯಲ್ಲಿಯೂ ಮೂರು ಲಕ್ಷ ಗುಲಾಬಿ ಹೂವುಗಳಿಂದ ವಿಶೇಷ ಸೃಷ್ಟಿ ನಿರ್ಮಿಸಲಾಗುತ್ತಿದೆ.

ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಪರಿಚಯಿಸಲು ಕೂಡ ಫಲ-ಪುಷ್ಪಗಳನ್ನು ಬಳಸಲಾಗುತ್ತಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಮಾದರಿಗಳನ್ನು ಹೂವುಗಳಿಂದ ಜೀವಂತವಾಗಿ ರೂಪಿಸಲಾಗುತ್ತಿದೆ. ಜೊತೆಗೆ, ಮೈಸೂರು ಅರಸರಾದ ರಾಜರ್ಷಿ ನವ್ವಡಿ ಕೃಷ್ಣರಾಜ ಒಡೆಯರ್, ಅಂಬಾರಿ ಹೊತ್ತ ಆನೆ, ನವದುರ್ಗೆಯ ಪ್ರತಿಮೆಗಳು, ಭೂಮಿಯನ್ನು ರಕ್ಷಿಸುವ ಸಂದೇಶ, ತಂಡಿ ಸಡಕ್ ಹಾಗೂ ಮಕ್ಕಳ ಉದ್ಯಾನ ಇತ್ಯಾದಿ ಕೂಡ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss