ಹುಬ್ಬಳ್ಳಿ: ಪ್ರಧಾನ ಮಂತ್ರಿಗಳ ಬಹು ಅಪೇಕ್ಷಿತ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡಿತಾ ಇದೆ.ಕಳೆದ 6 ಕಂತುಗಳಲ್ಲಿ ಕೇಂದ್ರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಕೊಡುವ ಕೆಲಸ ಆರಂಭ ಮಾಡಿದ್ರು.6 ಮೇಳದಲ್ಲಿ 4 ಲಕ್ಷದ 30 ಸಾವಿರ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಕೊಡಲಾಗಿದೆ.ಇವತ್ತು ದೇಶದಾದ್ಯಂತ 44 ಕಡೆ 70 ಸಾವಿರ ಯುವಕರಿಗೆ ಉದ್ಯೋಗ ಕೊಡುವ ಕೆಲಸ ನಡಿತಾ ಇದೆ.ಕೆಲಸಕ್ಕೆ ಸೇರುವವರು ಕೇವಲ ಉದ್ಯೋಗಿಗಳಲ್ಲ ಕರ್ಮ ಯೋಗಿಗಳು.ಭಾರತದ ನಂಬರ್ ಒನ್ ದೇಶ ಮಾಡೋಕೆ ಶ್ರಮವಹಿಸಬೇಕು.
ವಿರೋಧ ಪಕ್ಷದ ನಾಯಕನ ನೇಮಕ ವಿಚಾರ
ಕಾಂಗ್ರೆಸ್ ಯಾವ ಭರವಸೆ ಕೊಟ್ಟು ಅಧಿಕಾರಕ್ಕೆ ಬಂತೋ ಆ ಭರವಸೆಗಳು ಈಗ ಈಡೇರುತ್ತಿಲ್ಲ.ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದೆ.ಅವರು ಕೊಟ್ಟಂತ 5 ಗ್ಯಾರೆಂಟಿಗಳನ್ನು ಮೊದಲ ಕ್ಯಾಬಿನೆಟ್ ನಲ್ಲಿ ಮಾಡ್ತೇವೆ ಅಂತ ಹೇಳಿದ್ದರು.ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಕೇಳ್ತೇನೆ ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ.? ಮೊದಲ ಕ್ಯಾಬಿನೆಟ್ ನಲ್ಲಿ ನೀವು ಕೊಡೋದು ಯಾವಾಗ..?ಫ್ರೀ ಬಸ್ ಗೆ ಕೂಡ ಸರಿಯಾದ ಯೋಜನೆ ಆಗಿಲ್ಲ ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೀತಾ ಇವೆ, ಮುಂದಿನ ದಿನಗಳಲ್ಲಿ ಅವರಿಗೆ ಸಂಬಳ ಕೊಡೋಕು ಕಷ್ಟ ಆಗುತ್ತೆ.ಅವರು ಹತಾಶಾರಾಗಿ ಮಾತಾಡ್ತಾ ಇದ್ದಾರೆ.ನಮ್ಮ ಸ್ಟ್ಯಾಟರ್ಜಿಯಲ್ಲಿ ಮುಂದಿನ ದಿನಗಳಲ್ಲಿ ನಾವು ನಾಯಕನನ್ನು ಆಯ್ಕೆ ಮಾಡ್ತೇವೆ.
ಮಣಿಪುರ ಹಿಂಸಾಚಾರ ವಿಚಾರ
ಮಣಿಪುರದಲ್ಲಿ ಜಾತಿ,ಧರ್ಮ ಸಂಘರ್ಷ ನಡಿತಾ ಇದೆ.ಹಿಂದಿನ ಸರ್ಕಾರಗಳ ತಪ್ಪುಗಳ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಬೇರೆ ದೇಶದ ನುಸುಳುಕೋರರು ದಕ್ಷಿಣ ಭಾಗದಲ್ಲಿ ಜಮಾ ಆಗಿದ್ದಾರೆ.ಇವತ್ತು ನುಸುಳು ಕೋರರನ್ನು ಹೊರ ಹಾಕುವ ಕೆಲಸ ಕೇಂದ್ರ ಸರ್ಕಾರ ನಿರಂತರವಾಗಿ ಮಾಡ್ತಾ ಇದೆ.ನಾರ್ತ್ ಈಸ್ಟ್ ನ ಎಲ್ಲಾ ರಾಜ್ಯಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು.ನಾರ್ತ್ ಈಸ್ಟ್ ನಲ್ಲಿ ಭಾರತೀಯರು ಅಂತ ಒಪ್ಪಿಕೊಳ್ಳುತ್ತಿರಲಿಲ್ಲ.ಆದರೆ ಈಗ ಇಡೀ ನಾರ್ತ್ ಈಸ್ಟ್ ಎಲ್ಲಾ ರಾಜ್ಯಗಳಲ್ಲಿ ನಮ್ಮ ಭಾರತ ಅಂತಾರೆ.ಅಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸಹ ನಡೀತಾ ಇದೆ.ಮೊದಲ ಬಾರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಅವರು ನೋಡ್ತಾ ಇದ್ದಾರೆ.ಹೀಗಾಗಿ ವಿದ್ರೋಹಿ ಚಟುವಟಿಕೆ ನಡೆಸೋದಕ್ಕೆ ಅಲ್ಲಿಗೆ ಬರ್ತಾರೆ.ಕೇಂದ್ರ ಸರ್ಕಾರ ನಾರ್ತ್ ಈಸ್ಟ್ ನ ಎಲ್ಲಾ ರಾಜ್ಯಗಳಲ್ಲಿ ಶಾಂತಿ ನೆಲೆಸಬೇಕು.ಅವರು ಭಾರತ ಒಂದು ಭಾಗ ಆಗಬೇಕು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯ ಅವರಿಗೆ ಸಿಗಬೇಕು.ಪಾರ್ಲಿಮೆಂಟ್ ನಲ್ಲಿ ಚರ್ಚೆ ಬಿಟ್ಟು ಹೊರಗೆ ಚರ್ಚೆ ಮಾಡೋಕೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಮಾಡ್ತಾ ಇವೆ.ಯಾವುದೇ ಉತ್ತರಕ್ಕೂ ಭಾರತ ಸರ್ಕಾರ ಸಿದ್ದ ಇದೆ.ಪಶ್ಚಿಮ ಬಂಗಾಳದ ಮಾಲ್ದಾದಲ್ಲಿ ಮಹಿಳೆಯಾರನ್ನು ಬೆತ್ತಲೆಗೊಳಿಸಿದ ಪ್ರಕರಣ ಹೊರ ಬರ್ತಾ ಇದೆ.ರಾಜಕಾರಣ ಎಲ್ಲರೂ ಮಾಡ್ತಾರೆ, ಕೊಲ್ಲುವ ರಾಜಕಾರಣ ವೆಸ್ಟ್ ಬೆಂಗಾಲ್ ನಲ್ಲಿ ನಡೀತಾ ಇದೆ.ಕೇಂದ್ರ ಸರ್ಕಾರವನ್ನ ಕೆಟ್ಟದಾಗಿ ಬಿಂಬಿಸುವ ಕೆಲಸ ನಡೀತಾ ಇದೆ.
Kolara BJP Protest: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ ಬಿಜೆಪಿ ನಾಯಕರು..!
Reservation: ಹಿಂದುಳಿದ ಸಮುದಾಯದವರಿಗೆ ಚುನಾವಣೆಗಳಲ್ಲಿ ಮೀಸಲಾತಿ ದೊರೆಯಬೇಕು..!