Health tips:
ಸಿಹಿ ಮತ್ತು ಹುಳಿ ಮಿಶ್ರಣವಿರುವ ಕಿತ್ತಳೆ ಹಣ್ಣನ್ನು ಎಲ್ಲರು ತಿನ್ನಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ,ಕಿತ್ತಳೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೂ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ. ಕಿತ್ತಳೆಹಣ್ಣಿನಲ್ಲಿ ವಿಟಮಿನ್ “ಸಿ” ಉತ್ತಮವಾಗಿದೆ.
ಕಿತ್ತಳೆ ಹಣ್ಣು ತಿನ್ನಲು ಎಷ್ಟು ರುಚಿಕರವೋ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಉಪಯುಕ್ತ ಫಲ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಇರುವುದರಿಂದ ರಕ್ತ ಶುದ್ಧಿ ಮಾಡುವುದರ ಜೊತೆಗೆ ಬಾಯಾರಿಕೆ ದೂರ ಮಾಡುತ್ತದೆ.
ಕಿತ್ತಳೆ ಹಣ್ಣು ಸೇವನೆಯಿಂದ ನಿಮ್ಮ ಚರ್ಮ ಆರೋಗ್ಯ ವಾಗಿರುತ್ತದೆ ,ಹಾಗೂ ಕೂದಲು ಮತ್ತು ಕಣ್ಣಿನ ದೃಷ್ಟಿಗೆ ಇದು ತುಂಬಾ ಉಪಯುಕ್ತವಾಗಿದೆ. ಒಂದು ಕಿತ್ತಳೆ ಇಡೀ ದಿನ ನಿಮ್ಮ ದೇಹಕ್ಕೆ ವಿಟಮಿನ್ ಸಿ ಪೂರೈಸುತ್ತದೆ. ವಿಟಮಿನ್ “ಸಿ” ದೇಹದಲ್ಲಿ ಕಬ್ಬಿಣವನ್ನು ಸಂಗ್ರಹಿಸಲು ಅವಶ್ಯಕವಾಗಿದೆ. ಚರ್ಮದ ಯಾವುದೇ ಸಮಸ್ಯೆಗಳಿದ್ದರೆ ಕಿತ್ತಳೆ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮಗೆ ವಯಸ್ಸಾಗಿದ್ದರೆ ಅಥವಾ ವಯಸ್ಸಾದವರಂತೆ ಕಾಣುತ್ತಿದ್ದರೆ ಕಿತ್ತಳೆ ನೀವಿನ್ನು ಚಿಕ್ಕವರಂತೆ ಕಾಣಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮದ ಹೊಳಪಿಗಾಗಿಯೂ ನೀವು ಈ ಹಣ್ಣನ್ನು ಸೇವಿಸಬಹುದು
ಕಿತ್ತಳೆಯಲ್ಲಿ ಫೈಬರ್ ಸಮೃದ್ಧ ವಾಗಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಿ ಕರುಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.ಹಾಗೂ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹದ ಸಮಸ್ಯೆಯನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಕಿತ್ತಳೆ ಹಣ್ಣು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಮಕ್ಕಳ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ .
ಒಂದು ಕಿತ್ತಳೆ ಹಣ್ಣಿನಲ್ಲಿ 170ಕ್ಕೂ ಹೆಚ್ಚು ಫೈಟೊಕೆಮಿಕಲ್‌ಗಳು, 60 ಫ್ಲೇವನಾಯ್ಡ್‌ಗಳಿವೆ. ಇವು ಇತರ ಯಾವುದೇ ಉತ್ಕರ್ಷಣ ನಿರೋಧಕ ಆಹಾರ ಅಥವಾ ಔಷಧಿಗಳಿಗಿಂತ ಹೆಚ್ಚು. ಕಿತ್ತಳೆ ಕ್ಯಾನ್ಸರ್, ಸಂಧಿವಾತ, ಮಧುಮೇಹ ಮತ್ತು ಆಲ್ಝೈಮರ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ.