ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದ ಗಣೇಶನ ಮೆರವಣಿಗೆ ಕಲ್ಲು ತೂರಾಟದ ಘಟನೆ ಆಕಸ್ಮಿಕ ಅಲ್ಲ, ಅದು ಪೂರ್ವ ನಿಯೋಜಿತ ಸಂಚು. ಮಸೀದಿಗಳಲ್ಲಿ ಮೊದಲೇ ಪ್ಲಾನ್ ಮಾಡಿ ಲೋಡ್‌ಗಟ್ಟಲೆ ಕಲ್ಲನ್ನು ಇಟ್ಟುಕೊಂಡಿದ್ದರು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಗಣೇಶ ಮೆರವಣಿಗೆ ವೇಳೆ ಮದ್ದೂರಿನ ಲೈಟ್ ಯಾಕೆ ಆಫ್ ಮಾಡಿದ್ರು? ಮಸೀದಿಯೊಳಗೆ ಕಲ್ಲು ಯಾಕೆ ತಂದು ಇಟ್ಟುಕೊಂಡ್ರು? ಇಷ್ಟೆಲ್ಲ ಯೋಚಿಸಿ ಕಲ್ಲು ತೂರಾಟ ನಡೆಸಿದರೂ ಸಿಎಂ ಹೇಳ್ತಾರೆ ಬಿಜೆಪಿಯವರ ಪ್ರಚೋದನೆ ಎಂದು. ಸಿಎಂ ಸಿದ್ದರಾಮಯ್ಯ ಅವರೇ ನೀವು ಯಾರ ಪರವಾಗಿದ್ದೀರಾ? ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ತಕ್ಷಣ ಕ್ರಮ ಜರುಗಿಸಿದ್ದರೆ ಯಾವ ಪ್ರತಿಭಟನೆಯೂ ಆಗುತ್ತಿರಲಿಲ್ಲ. 22 ದೇಶದ್ರೋಹಿಗಳನ್ನು ಬಂಧಿಸಿ, 500 ಜನ ದೇಶ ಭಕ್ತರ ಮೇಲೆ ಕೇಸು ಹಾಕಿದ್ದೀರಲ್ಲ. ಸಿಎಂ ಈ ಸರ್ಕಾರ ದೇಶದ್ರೋಹಿಗಳ ಪರ ನಿಂತಿರುವುದು ಸ್ಪಷ್ಟವಾಗುತ್ತಿದೆ.
ಶಿವಮೊಗ್ಗದ ರಾಷ್ಟ್ರಭಕ್ತರ ಬಳಗದಿಂದ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಕೆಎಸ್ ಈಶ್ವರಪ್ಪ ಅವರು, ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ಮಸೀದಿಯಿಂದಲೇ ನಡೆಸಿದ್ದಾರೆ. ಭದ್ರಾವತಿಯಲ್ಲಿ ಈದ್ ಮಿಲಾದ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಒಬ್ಬರು ಕೂಡ ಇದನ್ನೂ ವಿರೋಧ ಮಾಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂರು ತಂಡಗಳನ್ನು ರಚನೆ ಮಾಡಿದ್ದೇನೆ. ಪ್ರಕರಣ ಗಂಭೀರವಾಗಿ ತೆಗೆದು ಕೊಂಡಿದ್ದೇನೆ ಎಂದು ಹೇಳಿದ ಎಸ್ ಪಿ ಅವರಿಗೆ ಶಹಬ್ಬಾಷ್ ಹೇಳುತ್ತೇನೆ. ಆದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳನ್ನು ಇದುವರೆಗೂ ಕೂಡ ಅರೆಸ್ಟ್ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಂದಲೂ ಹೇಳಿಕೆ ಬಂದಿಲ್ಲ. ಮೂಲ ಕಾಂಗ್ರೆಸ್ ಗೆ ಡೂಪ್ಲಿಕೇಟ್ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.
ಇನ್ನು ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತೀಯ? ಹಿಂದೂವಾಗಿ ಸ್ಪರ್ಧೆ ಮಾಡ್ತಿಯಾ? ಮುಸ್ಲಿಮನಾಗಿ ಸ್ಪರ್ಧೆ ಮಾಡ್ತೀಯಾ? ನಿನಗೆ ತಾಕತ್ತಿದ್ದರೆ ಅಭ್ಯರ್ಥಿಯಾಗಿ ಈಗಲೇ ಘೋಷಣೆ ಮಾಡು ಎಂದು ಶಾಸಕ ಸಂಗಮೇಶ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ