ಮಂಗಳೂರು: ಹಣ ಯಾರನ್ನು ಬೇಕಾದರೂ ಸಂಬಂಧಿಕರನ್ನಾಗಿ ಮಾಡುತ್ತಾರೆ. ಸಂಬಂದಿಕರನ್ನುಸಹ ದೂರ ಮಾಡುತ್ತದೆ. ಇಲ್ಲಿ ಹಣಕ್ಕಾಗಿ ಒಬ್ಬ ಯುವಕ ಅಜ್ಜ ಅಜ್ಜಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ ಅಸಲಿಗೆ ಆ ಕಥೆ ಏನು ಅಂತೀರಾ ಇಲ್ಲಿದೆ ನೋಡಿ. ತ್ರಿಶೂಲ್ ವೈಲತ್ತೂರ್ ನ ನಿವಾಸಿಯಾಗಿರುವ ಅಹ್ಮದ್ ಅಕ್ಬಲ್ ಎನ್ನುವ ಯುವಕ ಜುಲೈ 23 ರಂದು ಕೇರಳದ ತ್ರಿಶೂರ್ ನಲ್ಲಿ ವಾಸವಾಗಿದ್ದ ಅಜ್ಜ ಅಜ್ಜಿಯನ್ನುಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ಮಂಗಳೂರು ನಗರದ ಬೀದಿಗಳಲ್ಲಿಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ಸ್ಟ್ರೀಟ್ನಲ್ಲಿರುವ ಚಿನ್ನಾಭರಣ ಅಂಗಡಿಗೆ ಹೋಗಿ ಆಭರಣಗಳನ್ನು ಮಾರಾಟ ಮಾಡಲು ಹೋದಾಗ ಅನುಮಾನಗೊಂಡು ಮಂಗಳೂರು ಉತ್ತರ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಿಸಿದಾಗ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಬಂದಿದ್ದಾಗಿ ಬಾಯ್ಬಿಟಿದ್ದಾನೆ. ಸಧ್ಯ ಈ ಪ್ರಕರಣವನ್ನ ಬೈಂದೂರು ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಪತ್ತೆ ಮಾಡಿದೆ.
ಇನ್ನು ಅಹ್ಮದ್ ಅಕ್ಮಲ್ ಮಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದ.ಇನ್ನು ಆತನನ್ನ ಪೊಲೀಸರು ಪರಿಶೀಲಿಸಿದಾಗ ಒಂದು ಚಾಕು, ಸ್ಕ್ರೂಡ್ರೈವರ್, ಮಂಗಳೂರು ವಿಶ್ವವಿದ್ಯಾನಿಲಯದ ಮಾಕ್ಸ್ರ್ ಕಾರ್ಡ ಸ್ಕ್ರೂ ಡ್ರೈವರ್ . ಒಂದು ಮುತ್ತಿನ ಸರ, ಮೂರು ಜೋಡಿ ಕಿವಿಯೋಲೆಗಳು, ಒಂದು ಸಣ್ಣ ಚಿನ್ನದ ಸರದ ಜೊತೆ ಬೆರಳಿನ ಉಂಗುರಗಳು ಮತ್ತು ಎರಡು ಚಿನ್ನದ ಬಳೆಗಳು ಇದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Awareness vehical: ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವ ಜಾಗೃತಿ ಮೂಡಿಸುವ ವಾಹನಗಳಿಗೆ ಚಾಲನೆ
Siddaramaiah : ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು