ಇಂದು 10,801 ಕೋವಿಡ್ ಪರೀಕ್ಷೆಯಲ್ಲಿ 126 ಮಂದಿಗೆ ಪಾಸಿಟಿವ್ | Karnataka Covid19 Update

ಬೆಂಗಳೂರು: ರಾಜ್ಯಾಧ್ಯಂತ ಇಂದು 10,801 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 126 ಮಂದಿಗೆ ಕೋವಿಡ್ ಪಾಸಿಟಿವ್ ಎಂದು ವರದಿಯಲ್ಲಿ ದೃಢಪಟ್ಟಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ 114, ದಕ್ಷಿಣ ಕನ್ನಡ, ಧಾರವಾಡ, ಕೋಲಾರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರದಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಹೇಳಿದೆ.

ಕಳೆದ 24 ಗಂಟೆಯಲ್ಲಿ ಹೊಸದಾಗಿ ರಾಜ್ಯಾಧ್ಯಂತ 126 ಮಂದಿಗೆ ಕೋವಿಡ್ ದೃಢಪಟ್ಟ ಕಾರಣ, ಸೋಂಕಿತರ ಸಂಖ್ಯೆ 3947209ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 99 ಮಂದಿ ಸೇರಿದಂತೆ 3905397 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ 1713 ಸಕ್ರೀಯ ಸೋಂಕಿತರು ಇದ್ದಾರೆ ಎಂದು ತಿಳಿಸಿದೆ.

About The Author