ಈ ತಿಂಗಳು ಬರೋಬ್ಬರಿ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಸಂಬಳ ಆಗೋದು ಅನುಮಾನವಾಗಿದೆ. ನೌಕರರಿಗೆ ಸರ್ಕಾರ ಅದೆಷ್ಟೋ ಬಾರಿ ಎಚ್ಚರಿಕೆ ನೀಡಿದ್ರೂ, ಉದ್ಯೋಗಿಗಳು ಆ ಒಂದು ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ. ಇದೇ ಕಾರಣಕ್ಕೆ 13 ಲಕ್ಷಗಳ ಸರ್ಕಾರಿ ನೌಕರರಿಗೆ ಆಗಸ್ಟ್ ತಿಂಗಳ ಸಂಬಳವಾಗೋದು ಅನುಮಾನವಾಗಿದೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿತ್ತು. ಆದ್ರೆ, ಸುಮಾರು 13 ಲಕ್ಷ ನೌಕರರು ಮಾನವ ಸಂಪದಾ ಎನ್ನುವ ಸರ್ಕಾರಿ ಪೋರ್ಟಲ್ನಲ್ಲಿ ಇದುವರೆಗೂ ತಮ್ಮ ಸ್ಥಿರ ಆಸ್ತಿಗಳ ವಿವರವನ್ನು ಸಲ್ಲಿಕೆ ಮಾಡಿಲ್ಲ. ಇದೇ ಕಾರಣಕ್ಕೆ ಲಕ್ಷಾಂತರ ನೌಕರರಿಗೆ ಈ ತಿಂಗಳು ವೇತನ ಆಗೋದು ಅನುಮಾವಾಗಿದೆ.
ಸರ್ಕಾರಿ ಅಧಿಕಾರಿಗಳು ಸ್ಥಿರ ಆಸ್ತಿಗಳನ್ನು ಸರ್ಕಾರಿ ಪೋರ್ಟಲ್ನಲ್ಲಿ ಘೋಷಣೆ ಮಾಡುವಂತೆ ಸಾಕಷ್ಟು ಬಾರಿ ತಿಳಿಸಲಾಗಿತ್ತು. ಈ ಬಗ್ಗೆ ಸಿಎಂ ಆದಿತ್ಯನಾಥ್ ಸರ್ಕಾರ ಹಲವು ಬಾರಿ ಗಡುವುಗಳನ್ನು ನಿಗದಿಪಡಿಸಿತ್ತು. ಆದರೂ ಸರ್ಕಾರಿ ಅಧಿಕಾರಿಗಳು ಆ ಗಡುವು ಮೀರಿದರು ತಮ್ಮ ಆಸ್ತಿ ವಿವರ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಈ ಬಾರಿ ಖಡಕ್ ಆಗಿ ಎಚ್ಚರಿಕೆ ಮಾಡಿರುವ ಸಿಎಂ ಯೋಗಿ ಸರ್ಕಾರ ಆಗಸ್ಟ್ 31ರೊಳಗೆ ತಮ್ಮ ಆಸ್ತಿಯ ಮಾಹಿತಿ ಘೋಷಿಸಿಲ್ಲ ಅಂದ್ರೆ ಈ ತಿಂಗಳ ಸಂಬಳ ಕಡಿತ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.
ಇದು ಕೇವಲ ವೇತನದ ಮೇಲೆ ಮಾತ್ರವಲ್ಲ, ಮುಂದೆ ಬಡ್ತಿ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿಯೇ, ನೌಕರರು ಆಸ್ತಿ ಘೋಷಣೆಗೆ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯ ಸರ್ಕಾರವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಸರ್ಕಾರ ಈ ಪೋರ್ಟಲ್ ಅನ್ನು ಜಾರಿಗೆ ಮಾಡಿದೆ. ಆದರೆ ಹಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತ ಸರ್ಕಾರದ ಮೇಲೆ ಪರಿಣಾಮ ಬೀರಿದೆ.