ಕರೊನಾ ವಿರುದ್ಧದ ಲಸಿಕೆ ಪ್ರಯೋಗದಲ್ಲಿ ಮುಂಚೂಣಿಯಲ್ಲಿರೋ ರಷ್ಯಾ ಇದೀಗ ವಿಶ್ವದ ಜನತೆಗೆ ಸಿಹಿಸುದ್ದಿಯೊಂದನ್ನ ನೀಡಿದೆ.ರಷ್ಯದಲ್ಲಿ 300 ಮಂದಿ ಮೇಲೆ ಸ್ಪುಟ್ನಿಕ್ ವಿ ಲಸಿಕೆ ಪ್ರಯೋಗ ಮಾಡಲಾಗಿದ್ದು ಇದರಲ್ಲಿ ಕೇವಲ 14 ಶೇ. ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ ಕಂಡು ಬಂದಿದೆ.
ಈ ವಿಚಾರವಾಗಿ ಮಾತನಾಡಿದ ರಷ್ಯಾ ಆರೋಗ್ಯ ಸಚಿವ ಮೈಕಲ್ ಮುರಾಷ್ಕೋ, 300 ಮಂದಿಯ ಮೇಲೆ ಈ ಕರೊನಾ ಲಸಿಕೆಯನ್ನ ಪ್ರಯೋದ ಮಾಡಿದೆವು. ಇದರಲ್ಲಿ 14 ಪ್ರತಿಶತ ಮಂದಿಯಲ್ಲಿ ಮಾತ್ರ ಮಾಂಸಖಂಡಗಳಲ್ಲಿ ನೋವು, ಆಯಾಸದಂತಹ ಸಣ್ಣ ಸಮಸ್ಯೆಗಳು ಕಾಣಿಸಿಕೊಂಡಿವೆ. ಇಂತಹ ಸಣ್ಣ ಸಮಸ್ಯೆಗಳನ್ನ ಸರಿ ಮಾಡಬಹುದು ಅಂತಾ ಅವರು ಹೇಳಿದ್ದಾರೆ.