Sunday, December 22, 2024

Latest Posts

Pak news : ಸಮಸ್ಯೆಗಳ ಸುಳಿಯ ಮಧ್ಯೆ ಪಾಕಿಸ್ತಾನದಲ್ಲಿ ಚುನಾವಣೆಗೆ ಮುಹೂರ್ತ

- Advertisement -

ಇಸ್ಲಾಮಾಬಾದ್ : ಭಾರತ ಅಂದ್ರೆ ನಖಶಿಖಾಂತ ಉರಿದುಕೊಳ್ಳೋ ಪಾಕಿಸ್ತಾನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ, ಹಳ್ಳ ಹಿಡಿದ ಆರ್ಥಿಕತೆ, ಮತ್ತೊಂದು ಕಡೆ ಗಿಲ್ಗಿಟ್ ಬಾಲ್ಟಿಸ್ತಾನ ಜನರ ಬಂಡಾಯ, ಮಗದೊಂದು ಕಡೆ ಉಗ್ರರ ಉಪಟಳ, ಇನ್ನೊಂದು ಕಡೆ ಅಫ್ಘಾನಿಸ್ತಾನದ ತಾಲಿಬಾನಿ ಯೋಧರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ.ಇಂಥಾ ಕೇಡುಗಾಲದಲ್ಲಿ ಪಾಕಿಸ್ತಾನದ ಲೋಕಸಭೆಗೆ ಚುನಾವಣೆ ನಡೆಯಲಿದೆ.

ಪಾಕಿಸ್ತಾನದಲ್ಲಿ ನವೆಂಬರ್‌ 6ರಂದು ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಬಹುತೇಕ ನವೆಂಬರ್ 6ಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಮುಖ್ಯ ಚುನಾವಣೆ ಆಯುಕ್ತ ಸಿಕಂದರ್‌ ಸುಲ್ತಾನ್ ರಾಜಗೆ ಬರೆದಿರುವ ಪತ್ರದಲ್ಲಿ, ನ್ಯಾಷನಲ್‌ ಅಸೆಂಬ್ಲಿ ವಿಸರ್ಜಿಸಿ 90 ದಿನ ಮುಗಿಯುವ ಒಳಗೆ ಮತದಾನ ನಡೆಸಲು ಅಲ್ವಿ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲೂ ಭಾರತದಂತೆಯೇ ಲೋಕಸಭೆ ಇದೆ. ಅದರ ಸದಸ್ಯ ಬಲ 342, ಭಾರತದಂತೆಯೇ ಪಾಕಿಸ್ತಾನದ ಲೋಕಸಭೆಗೆ 5 ವರ್ಷ ಅಧಿಕಾರವಧಿ ಇರುತ್ತದೆ. ಅದರೆ ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗಿದೆ. ಆದರೆ ಈ ಅವಧಿ ಪೂರ್ಣವಾಗುವ ಮೊದಲು, ಅಂದ್ರೆ ಆಗಸ್ಟ್‌ 9ಕ್ಕೆ ಪಾಕ್ ಸಂಸತ್ ವಿಸರ್ಜನೆ ಮಾಡುವಂತೆ ಅಂದಿನ ಪ್ರಧಾನಿ ಶಹಬಾಜ್ ಷರೀಫ್ ಶಿಫಾರಸು ಕಳುಹಿಸಿದ್ದರು. ಹೀಗೆ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಇದೀಗ ನವೆಂಬರ್ 6ರಂದು ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

 

HD Kumarswamy: ವೀರಪ್ಪಮೊಯ್ಲಿ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲ..!

Libya Flood : ಭಾರೀ ಪ್ರವಾಹಕ್ಕೆ ತತ್ತರಿಸಿದ ಲಿಬಿಯಾ : 2000 ಸಾವು

White House: ಕೆಲಸಕ್ಕೆ ಅರ್ಜಿಸಲ್ಲಿಸುವಂತೆ ಒತ್ತಾಯಿಸುತ್ತಿರುವ ಅಮೇರಿಕಾ ಸರ್ಕಾರ

- Advertisement -

Latest Posts

Don't Miss