Wednesday, April 24, 2024

Latest Posts

ಟಿ20 ವರ್ಲ್ಡ್ ಕಪ್‌ಗಾಗಿ ಆರ್ಮಿಯಿಂದ ತರಬೇತಿ ತೆಗೆದುಕೊಂಡ ಪಾಕ್ ಟೀಂ

- Advertisement -

International Sports News: ಟಿ20 ವರ್ಲ್ಡ್ ಕಪ್‌ಗಾಗಿ ಪಾಕ್ ಕ್ರಿಕೇಟಿಗರು, ತಮ್ಮ ಆರ್ಮಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಆರ್ಮಿಯಲ್ಲಿ ಯಾವ ರೀತಿಯಾಗಿ ತರಬೇತಿ ನೀಡುತ್ತಾರೋ, ಕ್ರಿಕೇಟಿಗರಿಗೂ ಕೂಡ ಅದೇ ರೀತಿ ಟ್ರೇನಿಂಗ್ ನೀಡಲಾಗುತ್ತಿದೆ.

ಪಾಕಿಸ್ತಾನದ ಕಾಕುಲ್ ಎಂಬ ಫಿಸಿಕಲ್ ಇನ್‌ಸ್ಟಿಟ್ಯೂಶನ್‌ನಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ಒಟ್ಟು 29 ಆಟಗಾರರು, ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಪಾಕ್ ಕ್ರಿಕೇಟಿಗರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಬೇರೆ ಬೇರೆ ಮೈದಾನದಲ್ಲಿ ತರಬೇತಿ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಪಾಕ್ ಕ್ರಿಕೇಟಿಗರು, ಈ ತರಬೇತಿ ತುಂಬಾ ಕಠಿಣವಾಗಿದೆ. ತುಂಬಾ ಕಷ್ಟಕರವಾಗಿದೆ ಎಂದಿದ್ದಾರೆ. ಇನ್ನು ಕೆಲವರು ನಾನು ಆರ್ಮಿಗೆ ಬರಬೇಕು, ದೇಶ ಸೇವೆ ಮಾಡಬೇಕು ಅಂತಿದ್ದೆ. ಆದರೆ ಇದೀಗ ನನಗೆ ಆರ್ಮಿಯವರಿಗೆ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ. ಟ್ರೇನಿಂಗ್ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss