ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ವಾಯುವ್ಯ ಪಾಕ್ ನಲ್ಲಿ ಹವಮಾನ ಬದಲಾವಣೆಯಿಂದ ಉಂಟಾದ ಮೇಘಸ್ಪೋಟದಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಕನಿಷ್ಠ 337 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಹಲವರು ಮಂದಿ ನಾಪತ್ತೆಯಾಗಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ವಾಯುವ್ಯ ಪಾಕಿಸ್ತಾನ ಆಕ್ರಮಿತ ಖೈಬರ್ ಪಖ್ತುಂಖ್ವಾ ಮತ್ತು ಪಿಒಕೆಯ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಮೇಘಸ್ಫೋಟ ಸಂಭವಿಸಿ ಉಂಟಾದ ಭೀಕರ ಪ್ರವಾಹದಲ್ಲಿ ಇಡೀ ಪಟ್ಟಣವೊಂದು ಕೊಚ್ಚಿಕೊಂಡು ಹೋಗಿದೆ. ಕಿಶ್ತ್ವಾರ್ ಜಿಲ್ಲೆಯಲ್ಲಿ, ತುರ್ತು ತಂಡಗಳು ದೂರದ ಚೋಸಿಟಿ ಗ್ರಾಮದಲ್ಲಿ ರಕ್ಷಣಾ ಪ್ರಯತ್ನಗಳನ್ನು ಮುಂದುವರೆಸಿವೆ. ಅಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿ, ಸುಮಾರು 150 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಸುಮಾರು 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪರ್ವತ ಜಿಲ್ಲೆಯಾದ ಬುನೇರ್‌ನಲ್ಲಿ ಮೇಘಸ್ಫೋಟದಿಂದ ಭೀಕರ ಪ್ರವಾಹ ಉಂಟಾಗಿದ್ದು, ಗಂಟೆಗಳ ಕಾಲ ನಡೆಸಿದ ಪ್ರಯತ್ನದ ನಂತರ 54 ಶವಗಳು ಪತ್ತೆಯಾಗಿವೆ.ಹಲವಾರು ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ತುರ್ತು ಸೇವೆಯ ವಕ್ತಾರ ಮೊಹಮ್ಮದ್ ಸುಹೈಲ್ ಹೇಳಿದ್ದಾರೆ, ಅಲ್ಲಿ ಶುಕ್ರವಾರ ಧಾರಾಕಾರ ಮಳೆ ಮತ್ತು ಮೇಘ ಸ್ಫೋಟಗಳು ಭಾರಿ ಪ್ರವಾಹಕ್ಕೆ ಕಾರಣವಾದವು.
ಪರ್ವತಗಳಿಂದ ಧಾವಿಸಿದ ನೀರಿನ ಪ್ರವಾಹದಿಂದ ಮನೆಗಳು ನೆಲಸಮಗೊಂಡ ಪ್ರದೇಶಗಳ ಮೇಲೆ ಶೋಧ ಕಾರ್ಯಗಳು ಕೇಂದ್ರೀಕರಿಸಿವೆ. ನೀರಿನ ಜೊತೆಗೇ ಮನೆಗಳ ಮೇಲೆ ಬೃಹತ್ ಗಾತ್ರದ ಅಪ್ಪಳಿಸಿದ ಬೃಹತ್ ಬಂಡೆಗಳು ಎಲ್ಲವನ್ನು ಹೊತ್ತೊಯ್ದಿದೆ. ಕಡಿಮೆ ಸಮಯದಲ್ಲಿ ಸಣ್ಣ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಮೇಘಸ್ಫೋಟವು ಇತ್ತೀಚಿನ ದಿನಗಳಲ್ಲಿ ಭಾರತದ ಆಡಳಿತದಲ್ಲಿರುವ ಕಾಶ್ಮೀರದಲ್ಲಿ ವಿನಾಶಕ್ಕೆ ಕಾರಣವಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ