Sunday, July 6, 2025

Latest Posts

ತನ್ನ ಶಿಫ್ಟ್ ಮುಗೀತು ಅಂತಾ ಪಾಕಿಸ್ತಾನಿ ಪೈಲಟ್ ಮಾಡಿದ್ದೇನು..?

- Advertisement -

ಸಾಮಾನ್ಯವಾಗಿ ಆಫೀಸುಗಳಲ್ಲಿ ತಮ್ಮ ತಮ್ಮ ಶಿಫ್ಟ್ ಮುಗಿದ ಬಳಿಕ, ಜನ ಮನೆಗೆ ತೆರಳುತ್ತಾರೆ. ಆದ್ರೆ ಓರ್ವ ಪೈಲಟ್ ಹೀಗೆ ಮಾಡಿದ್ರೆ ಹೇಗಿರತ್ತೆ..? ಪಾಕಿಸ್ತಾನದ ಪೈಲಟ್ ಒಬ್ಬರು ಹೀಗೆ ಮಾಡಿದ್ದಾನೆ. ತಲುಪುವ ಸ್ಥಳ ತಲುಪುವ ಮುನ್ನವೇ, ಯಾವುದೋ ಜಾಗದಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಿ, ತನ್ನ ಪಾಳಿ ಮುಗೀತು ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ.

ರಿಯಾದ್‌ನಿಂದ ಹೊರಟ ವಿಮಾನ ಇಸ್ಲಾಮಾಬಾದ್‌ಗೆ ತೆರಳಬೇಕಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ವಿಮಾನವನ್ನು ಅರ್ಧಕ್ಕೆ ಲ್ಯಾಂಡ್ ಮಾಡಬೇಕಾಯಿತು. ಇದಾದ ಬಳಿಕ ಪೈಲಟ್ ತನ್ನ ಡ್ಯೂಟಿಯ ಸಮಯ ಮುಗೀತು. ತಾನಿನ್ನು ವಿಮಾನ ಚಲಾಯಿಸಲು ಆಗುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಕೋಪಗೊಂಡ ಪ್ರಯಾಣಿಕರು, ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾಗಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಹೆಚ್ಚಿಸಲಾಯಿತು.

ಆದ್ರೆ ನಿಂತ ಸ್ಥಳದಿಂದ ವಿಮಾನ ಮಾತ್ರ ಹೊರಡಲಿಲ್ಲ. ಹಾಗಾಗಿ ಅಲ್ಲೇ ಇದ್ದ ಹೊಟೇಲ್‌ನಲ್ಲಿ ಪ್ರಯಾಣಿಕರಿಗೆಲ್ಲ ವ್ಯವಸ್ಥೆ ಮಾಡಲಾಯಿತು. ಆಗ ಮಾತನಾಡಿದ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಕ್ತಾರರು, ವಿಮಾನ ಚಲಾಯಿಸಲು ಪೈಲಟ್‌ಗಳು ವಿಶ್ರಾಂತಿ ಪಡೆಬೇಕಾಗುತ್ತದೆ. ಅವರಿಗೆ ಸರಿಯಾಗಿ ನಿದ್ದೆ ಮಾಡಬೇಕಾಗುತ್ತದೆ. ಯಾಕಂದ್ರೆ ರಾತ್ರಿ 11 ಗಂಟೆಗೆ ನೀವು ಇಸ್ಲಾಮಾಬಾದ್ ತಲುಪಲಿದ್ದೀರಿ. ಅಲ್ಲಿ ತನಕ ನಿದ್ದೆಗೆಟ್ಟು ವಿಮಾನ ಓಡಿಸಲಾಗುವುದಿಲ್ಲ. ಹಾಗೆ ಓಡಿಸಿದ್ದಲ್ಲಿ, ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೈಲಟ್ ತಾನು ವಿಮಾನ ಚಲಾಯಿಸುವುದಿಲ್ಲ ಎಂದು ಹೇಳಿದರು ಎಂದು ಸಮಜಾಯಿಷಿ ನೀಡಿದ್ದಾರೆ.

- Advertisement -

Latest Posts

Don't Miss