Pakistani News: ಮಗಳ ತಲೆ ಮೇಲೆ ಕಿರೀಟ ಅಳವಡಿಸಿದ ತಂದೆ.. ಯಾಕೆ ಗೊತ್ತಾ..?

Pakistan News: ಸಾಮಾನ್ಯವಾಗಿ ಅಂಗಡಿ, ಮಾಲ್, ದೊಡ್ಡ ದೊಡ್ಡ ಮನೆಗಳು, ರಸ್ತೆಯ ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಥವಾ ಕಳ್ಳತನವಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿರುತ್ತದೆ.

ಆದರೆ ಪಾಕಿಸ್ತಾನದಲ್ಲಿ ಓರ್ವ ತಂದೆ ಮಗಳ ತಲೆಗೆ ಕಿರೀಟದಂತೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾನೆ. ಮಗಳು ಎಲ್ಲಿ ಹೋಗುತ್ತಾಳೆ..? ಏನು ಮಾಡುತ್ತಾಳೆ ಎಂದು ನೋಡಲು ತಂದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಇದನ್ನು ಧರಿಸಿರುವ ಮಗಳು ಕೂಡ, ತಂದೆಯ ನಿರ್ಧಾರದ ಬಗ್ಗೆ ನನಗೆ ಖುಷಿ ಇದೆ ಎಂದಿದ್ದಾಳೆ.

ಈ ವೀಡಿಯೋ ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಡೆದಾಡುವ ಕ್ಯಾಮೆರಾ ಉಮನ್. ಹೈಲೆವಲ್ ಸೆಕ್ಯೂರಿಟಿ ಡಿಜಿಟಲ್ ಪಾಕಿಸ್ತಾನ್. ಪಾಕಿಸ್ತಾನಿಗಳಿಗೆ ತಮ್ಮ ಜೀವನದ ಮೇಲೆ ಭರವಸೆ ಹೋಗಿದೆ ಎನ್ನಲು ಇದು ಸ್ಪಷ್ಟ ಉದಾಹರಣೆ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.

About The Author