Sunday, September 8, 2024

Latest Posts

ಪ್ರಧಾನಿಗೆ ಧನ್ಯವಾದ ಹೇಳಿದ ಪಾಕಿಸ್ತಾನಿ ವಿದ್ಯಾರ್ಥಿನಿ- ಅಷ್ಟಕ್ಕೂ ಥ್ಯಾಂಕ್ಸ್ ಹೇಳಿದ್ದೇಕೆ..?

- Advertisement -

ತಮ್ಮ ದೇಶದ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ರಕ್ಷಿಸಿ ತರುವಲ್ಲಿ ಭಾರತ ಸರ್ಕಾರದ ಮಹತ್ತರ ಪಾತ್ರವೇನು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ.  ರಷ್ಯಾ ಅಧ್ಯಕ್ಷ ಪುಟೀನ್ ಬಳಿ ಮಾತನಾಡಿ, ಕದನ ವಿರಾಮ ತೆಗೆದುಕೊಳ್ಳುವಂತೆ ಹೇಳಿದ ಪ್ರಧಾನಿ ಮೋದಿ, ಅವರನ್ನ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಿದ್ದರು. ಆಪರೇಶನ್ ಗಂಗಾ ಮೂಲಕ ಎಷ್ಟೋ ವಿದ್ಯಾರ್ಥಿಗಳನ್ನ ಭಾರತಕ್ಕೆ ತರಲಾಗಿದೆ.

ಅಲ್ಲದೇ ಭಾರತ ಧ್ವಜದ ಸಹಾಯದಿಂದ ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳು ಜೀವ ಉಳಿಸಿಕೊಂಡು ಉಕ್ರೇನ್‌ನಿಂದ ತಮ್ಮ ದೇಶಕ್ಕೆ ಮರಳಿದ್ದಾರೆ. ಅದೇ ರೀತಿ ಪಾಕಿಸ್ತಾನಿ ವಿದ್ಯಾರ್ಥಿಯನ್ನ ಭಾರತದ ಅಧಿಕಾರಿಗಳು ರಕ್ಷಿಸಿದ್ದು, ಅದಕ್ಕಾಗಿ ಆ ವಿದ್ಯಾರ್ಥಿನಿ ಅಧಿಕಾರಿಗಳಿಗೆ ಮತ್ತು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾಳೆ. ಅಸ್ಮಾ ಶಫೀಕ್ ಎಂಬ ವಿದ್ಯಾರ್ಥಿನಿ ಹೀಗೆ ಧನ್ಯವಾದ ತಿಳಿಸಿದ್ದಾಳೆ.

ಈ ಬಗ್ಗೆ ಮಾತನಾಡಿದ ಅಸ್ಮಾ ಶಫೀಕ್, ನಮ್ಮನ್ನು ಉಕ್ರೇನ್ ಯುದ್ಧಭೂಮಿಯಿಂದ ಕರೆ ತಂದಿದ್ದಕ್ಕಾಗಿ, ಭಾರತೀಯ ಪ್ರಧಾನಮಂತ್ರಿಗೆ, ಭಾರತೀಯ ಎಂಬೆಸ್ಸಿಗಳಿಗೆ ಧನ್ಯವಾದ. ನಾವು ಸೇಫ್ ಆಗಿ ನಮ್ಮ ದೇಶವನ್ನು ತಲುಪಲು ನೀವು ಸಹಾಯ ಮಾಡಿದ್ದೀರಿ. ಅಲ್ಲಿರುವ ಇನ್ನಷ್ಟು ವಿದ್ಯಾರ್ಥಿಗಳು ಸೇಫ್ ಆಗಿ ಮನೆ ತಲುಪಲಿ ಎಂದು ನಾನು ಆಶಿಸುತ್ತೇನೆ ಎಂದಿದ್ದಾಳೆ.

- Advertisement -

Latest Posts

Don't Miss