ಅರಮನೆ ಪ್ರವೇಶ ಟಿಕೆಟ್ ದುಬಾರಿ…!

www.karnatakatv.net :ಮೈಸೂರು: ದಸರಾ ಮಹೋತ್ಸವವು ಸ್ವಲ್ಪ ದಿನಗಳಲ್ಲಿ ಆರಂಭವಾಗಲಿದ್ದು, ಅರಮನೆಯಲ್ಲಿ ಸಂಭ್ರಮ ಸಡಗರ ಎಲ್ಲೆಡೆ ತುಂಬಿದೆ. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ.

ಕೊರೊನಾ ಹಿನ್ನಲೆಯಲ್ಲಿ  ಪಾರಂಪರಿಕ ಜಟ್ಟಿ ಕಾಳಗವನ್ನು ರದ್ದು ಗೊಳಿಸಲಾಗಿದೆ. ಅ.1 ಕ್ಕೆ ರತ್ನ ಖಚಿತ ಸಿಂಹಾಸನವನ್ನು ಜೋಡನೆ ಮಾಡಲಿದ್ದು, ಆದಕಾರಣ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಮಾಡಲಾಗಿದೆ.

ಟಿಕೆಟ್ ದರ ಏರಿಸಿ ಪ್ರವಾಸಿಗರಿಗೆ ಶಾಕ್ ನೀಡಲಾಗಿದ್ದು, ವಯಸ್ಕರಿಗೆ 100ರೂ ಮಕ್ಕಳಿಗೆ 50ರೂ ನಿಗದಿ ಮಾಡಲಾಗಿದೆ. ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೇ ಅರಮನೆ ಪ್ರವೇಶ ದರ ಏರಿಕೆ ಮಾಡಲು ತಿರ್ಮಾನಿಸಲಾಗಿದೆ. ಇಂದಿನಿಂದಲೇ ದರ ಏರಿಕೆಗೆ ಅರಮನೆ ಆಡಳಿತ ಮಂಡಳಿ ಆದೇಶವನ್ನು ನೀಡಿದೆ. ಹಾಗೇ  ಶಾಲಾ ಮಕ್ಕಳಿಗೆ ಹಳೆಯ ದರ 20 ರೂ. ಹೊಸ ದರ 50 ರೂ ಏರಿಕೆ ಮಾಡಲಾಗಿದೆ. ಆದರೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಬೆಲೆ ಏರಿಕೆ ಮಾಡಿಲ್ಲ.  

ದಸರಾ ಕಾರ್ಯಕ್ರಮಗಳನ್ನು ಅ.7 ರಿಂದ 14 ರವರೆಗೂ ನಡೆಸಲಾಗುತ್ತಿದ್ದು, ಅ.7 ರಿಂದ ಅ.15 ರವರೆಗೆ ಮಧ್ಯಾಹ್ನ 2:30ರ ವರೆಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 7 ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ ನಡೆಯಲಿದ್ದು, ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್  ಸಿಂಹಾಸನವನ್ನು ಏರಿ ಖಾಸಗಿ ದರ್ಬಾರ್ ಮಾಡಲಿದ್ದಾರೆ.

ಹಾಗೇ 14 ರಂದು ಅರಮನೆಯಲ್ಲಿ ಆಯುಧ ಪೂಜೆ ನಡೆಯಲ್ಲಿದ್ದು, ಬೆಳಿಗ್ಗೆ 5:30 ರಿಂದ ಪೂಜಾ ವಿಧಿವಿಧಾನ ನಡೆಯಲಿದೆ.

ಕರ್ನಾಟಕ ಟಿವಿ- ಮೈಸೂರು

About The Author