ಪ್ಯಾನ್, ಆಧಾರ್, ಪಡಿತರ ಸೇರಿ ಜನವರಿಯಿಂದ ಬಿಗ್ ಚೇಂಜ್!

ಹೊಸ ವರ್ಷದ ಆರಂಭದಲ್ಲಿ ಸರ್ಕಾರ ಮತ್ತು ಉದ್ಯಮ ವಲಯದಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಜಾರಿ ಆಗಲಿವೆ. ನೌಕರರ ವೇತನದಿಂದ ವಾಹನ ಬೆಲೆಗಳವರೆಗೆ, ಬ್ಯಾಂಕಿಂಗ್ ನಿಯಮಗಳಿಂದ ಪ್ಯಾನ್–ಆಧಾರ್ ಲಿಂಕ್ ತನಕ ಎಲ್ಲದರಲ್ಲೂ ಬದಲಾವಣೆಯಾಗಲಿದೆ. ಮಧ್ಯವರ್ತಿಯಾಗಿರುವ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯವಾಗುವ 8ನೇ ವೇತನ ಆಯೋಗದ ಕಾರ್ಯಚಟುವಟಿಕೆ ಜನವರಿ 1ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಶಿಫಾರಸುಗಳು ವಾರ್ಷಿಕ ಮಧ್ಯಭಾಗದಲ್ಲಿ ಜಾರಿಗೆ ಬರಬಹುದಾಗಿದೆ. ಇದರಿಂದ ಲಕ್ಷಾಂತರ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಗಣನೀಯ ಹೆಚ್ಚಳ ಮತ್ತು ಮನೆ ಬಾಡಿಗೆ ಭತ್ಯೆ, ಇತರ ಸೌಲಭ್ಯಗಳಲ್ಲಿಯೂ ಬದಲಾವಣೆ ಆಗಲಿದೆ. ಹೊಸ ವರ್ಷದಲ್ಲಿ ಕಾರು ಖರೀದಿಸಲು ಯೋಚಿಸುತ್ತಿದ್ದರೆ, ಹೆಚ್ಚಿನ ವೆಚ್ಚದ ಭೀತಿ ಇದೆ.

ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಜನವರಿಯಿಂದ ವಾಹನಗಳ ಬೆಲೆ ಏರಿಕೆಗೆ ಮುಂದಾಗಲಿವೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯನಿರ್ವಹಣಾ ವೆಚ್ಚಗಳ ಕಾರಣದಿಂದ ಈ ಬೆಳವಣಿಗೆ ಅನಿವಾರ್ಯವೆಂದು ಕಂಪನಿಗಳು ತಿಳಿಸಿದ್ದಾರೆ.

ಬ್ಯಾಂಕಿಂಗ್ ವಲಯದಲ್ಲಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಿದೆ. ಸಾಲ ವಿತರಣೆ ಮತ್ತು ವಸೂಲಾತಿ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆ ತರಲಿದೆ. ಜೊತೆಗೆ, ಬ್ಯಾಂಕ್ ಖಾತೆಗಳ KYC ನವೀಕರಣ ಪ್ರಕ್ರಿಯೆ ಹೆಚ್ಚು ಕಟ್ಟುನಿಟ್ಟಾಗಲಿದೆ. ರೈಲ್ವೆ ಟಿಕೆಟ್ ಬುಕಿಂಗ್ ವಿಂಡೋದಲ್ಲಿ ತಾಂತ್ರಿಕ ಸುಧಾರಣೆಗಳು ಮತ್ತು ನಿಯಮ ಪರಿಷ್ಕರಣೆಗಳು ನಿರೀಕ್ಷಿಸಲಾಗಿವೆ. ಜೊತೆಗೆ, ಪ್ರತಿಮಾಸ ಪ್ರಾರಂಭದಲ್ಲಿ LPG ಸಿಲಿಂಡರ್ ಮತ್ತು ವೈಮಾನಿಕ ಇಂಧನ ಬೆಲೆಗಳಲ್ಲಿ ಪರಿಷ್ಕರಣೆ ಸಂಭವಿಸುತ್ತದೆ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಕೊಟ್ಟಿರುವ ಗಡುವಿನ ಮೇಲೆ ಹೊಸ ಸರ್ಕಾರ ಆದೇಶ ಹೊರಡಿಸಲು ನಿರೀಕ್ಷೆ ಇದೆ. ಲಿಂಕ್ ಮಾಡದ ಕಾರ್ಡ್‌ಗಳು ನಿಷ್ಕ್ರಿಯವಾಗಬಹುದು. ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಪಡಿತರ ವಿತರಣೆಯಲ್ಲಿ ಅಡಚಣೆ ಉಂಟಾಗಬಹುದು.
ಆದಾಯ ತೆರಿಗೆ ಪಾವತಿದಾರರಿಗೆ ಹೊಸ ವರ್ಷದ ಆರಂಭದಲ್ಲಿ ಕೆಲ ರಿಯಾಯಿತಿಗಳು ಮತ್ತು ಫೈಲಿಂಗ್ ನಿಯಮಗಳಲ್ಲಿ ಬದಲಾವಣೆಗಳು ಜಾರಿ ಆಗಲಿವೆ.

ಖಾಸಗಿ ವಲಯದ ಉದ್ಯೋಗಿಗಳ ವೇತನ ರಚನೆ ಕೂಡ ಬದಲಾವಣೆಗೊಳ್ಳಬಹುದು. ಹೊಸ ವರ್ಷವು ನೌಕರರ ವೇತನ, ವಾಹನ ಬೆಲೆ, ಬ್ಯಾಂಕಿಂಗ್ ನಿಯಮಗಳು, ತೆರಿಗೆ, ಕೈಗಾರಿಕಾ ಬೆಳವಣಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಜನರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹಣಕಾಸು ಮತ್ತು ಯೋಜನೆಗಳನ್ನು ಸಮಂಜಸವಾಗಿ ರೂಪಿಸಬೇಕಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author