Wednesday, July 23, 2025

Latest Posts

BELGAVI: ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ!

- Advertisement -

ಪಂಚಮಸಾಲಿಗರಿಗೆ 2ಎ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯದ ಪ್ರತಿ ಗ್ರಾಮದಲ್ಲಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
ಜನವರಿ 14ರಂದು ಕೂಡಲಸಂಗಮದಿಂದ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಆರಂಭಿಸಲಾಗುವುದು’ ಅಂತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಸರ್ಕಾರದ ವಿರುದ್ಧ ಹೋರಾಟ ನಡೆಸಿ ‘ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ, ಜಾಗೃತಿ ಮೂಡಿಸಲಾಗುವುದು. ಹಾಗೆ ತಾಲ್ಲೂಕು ಕೇಂದ್ರಗಳಲ್ಲೂ ಸಭೆ ನಡೆಸಿ ಜನರ ಸಲಹೆ–ಸೂಚನೆಗಳನ್ನು ಕ್ರೋಡೀಕರಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು’ ಅಂತ ಸ್ವಾಮೀಜಿ ತಿಳಿಸಿದರು.

 

 

ಇನ್ನು ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿ ‘ಬಸವ ರಕ್ಷಾ’ ಪತ್ರ ಕೊಟ್ಟು ಧೈರ್ಯ ತುಂಬುತ್ತಿದ್ದೇನೆ. ‘ರಕ್ತ ಚೆಲ್ಲಿದ್ದೀರಿ ಮೀಸಲಾತಿ ಪಡೆಯೋಣ’ ಎಂಬ ಘೋಷ ವಾಕ್ಯದೊಂದಿಗೆ ನಮ್ಮ ಹೋರಾಟ ಆರಂಭವಾಗಲಿದೆ. ಮೀಸಲಾತಿ ಕೊಡುವುದು ಅಸಾಂವಿಧಾನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರ ಹೇಳಿಕೆಯೇ ಅಸಾಂವಿಧಾನಿಕ’ ಅಂತ ಸ್ವಾಮೀಜಿ ಹರಿಹಾಯ್ದರು.

‘ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ವಿನಂತಿಸಿದ್ದೆವು. ಆದರೆ, ಅವರಿಗೆ ₹10 ಸಾವಿರ ಬಹುಮಾನ ನೀಡಿ ಪ್ರಚೋದನೆ ನೀಡಿದ್ದಾರೆ. ಪಂಚಮಸಾಲಿ ವಕೀಲರ ಪರಿಷತ್‌ ಮೂಲಕ ಲಾಠಿಚಾರ್ಜ್‌ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ. ರಾಜ್ಯ ಗೃಹ ಇಲಾಖೆಯನ್ನೇ ಹೈಕೋರ್ಟ್‌ ಪ್ರತಿವಾದಿ ಮಾಡಿ, ಸ್ಪಷ್ಟೀಕರಣ ಕೇಳಿದೆ’ ಅಂತ ಅಂದ್ರು.

‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಬಸವರಾಜ್ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಜಾತಿ–ಜನಾಂಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆಗ ಯಾವುದೇ ಆಯೋಗದ ವರದಿ ಪಡೆದಿಲ್ಲ. ಆಗ ಅಸಾಂವಿಧಾನಿಕ ಎಂದೂ ಪರಿಗಣಿಸಿಲ್ಲ. ಈಗ ಪಂಚಮಸಾಲಿಗಳಿಗೆ ಮಾತ್ರ ಈ ನಿಯಮಗಳು ಅಡ್ಡಬಂದಿವೆ’ ಅಂತ ಆರೋಪ ಮಾಡಿದ್ರು.

- Advertisement -

Latest Posts

Don't Miss