Thursday, September 19, 2024

Latest Posts

ಪಂಜುರ್ಲಿ ಫ್ಯಾಮಿಲಿ ದಾಬಾದಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ! ಕಣ್ಮುಚಿ ಕುಳಿತ ಅಬಕಾರಿ ಇಲಾಖೆ

- Advertisement -

Hubli News: ಹುಬ್ಬಳ್ಳಿ: ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಷ್ಟೇ ಸಭೆ ನಡೆಸಿ, ಮಾರ್ಗಸೂಚಿಗಳನ್ನು ಹೊರಡಿಸಿ, ಅಬಕಾರಿ ಅಧಿಕಾರಿಗಳಿಗೆ ಸೂಚನೆ ಕೊಡುತ್ತಲಿದೆ. ಆದ್ರೆ, ಅಬಕಾರಿ ಅಧಿಕಾರಿಗಳು ಮಾತ್ರ ನಮಗೂ ಅಕ್ರಮಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಇಲ್ಲೊಂದು ದಾಬಾದಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡ್ತಿರೋದು ಕರ್ನಾಟಕ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೌದು, ಹೀಗೇ ಬಿಂದಾಸ್ ಆಗಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿ ಹೊರವಲಯದ ಪಾಳೆ ಗ್ರಾಮದ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಪಂಜುರ್ಲಿ ಫ್ಯಾಮಿಲಿ ದಾಬಾದಲ್ಲಿ. ಈ ಮಾಲೀಕ ಯಾವುದೇ ಭಯ ಇಲ್ಲದೆ, ಯಾವುದೇ ಪರ್ಮಿಷನ್‌ ಇಲ್ದೇ, ಹೇಗೆಲ್ಲಾ ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡ್ತಿದ್ದಾನೆ ನೋಡಿ…

ಇಷ್ಟೊಂದು ಬಿಂದಾಸಾಗಿ ಮಾರಾಟ ಮಾಡುತ್ತಿರುವುದನ್ನು ನೋಡಿದ್ರೆ, ಅಬಕಾರಿ ಅಧಿಕಾರಿಗಳ ಕೈ ಬಿಸಿಯಾಗಿದೆ ಎಂಬಂತೆ ಅರ್ಥವಾಗುತ್ತದೆ. ಏನೇ ಅಕ್ರಮ ನಡೆದ್ರೆ ಪೊಲೀಸ್‌ ಇಲಾಖೆನೇ ಎಂಬ ಆಲೋಚನೆ ಮಾಡೋರು ಸ್ವಲ್ಪ ಅಬಕಾರಿ ಅಧಿಕಾರಿಗಳ ಕಡೆನೂ ನೋಡಬೇಕಾಗುತ್ತೆ. ಈ ಇಲಾಖೆ ಮಾತ್ರ ಯಾರ ಕಣ್ಣಿಗೆ ಕಾಣೋಲ್ಲ. ಯಾಕಂದ್ರೆ ಇವರು ಯಾವಾಗ ಬರ್ತಾರೋ ಯಾವಾಗ ಹೋಗ್ತಾರೋ ಎಲ್ಲಿ ದಾಳಿ ಮಾಡಿರುವ ಉದಾಹರಣೆಗಳೇ ಇಲ್ಲ.

ಇನ್ನೂ ಪಂಜುರ್ಲಿ ದಾಬಾದಲ್ಲಿ ಬಾಕ್ಸ್ ಬಾಕ್ಸ್ ಇಟ್ಟು ಸಾರಾಯಿ ಮಾರುತ್ತಿದ್ದಾರೆ. ಕಡಿಮೆ ದರದಲ್ಲಿ ಸಿಗುವ ಓಟಿ ಸೇರಿದಂತೆ ಇತರ ಸಾರಾಯಿ ಮಾರುತ್ತಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ರೂ ಹುಬ್ಬಳ್ಳಿ ತಾಲ್ಲೂಕಿನ ಗ್ರಾಮೀಣ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ನೋಡಿದ್ರೆ ಏನೋ ಸಮ್‌ತಿಂಗ್ ಸಮ್‌ತಿಂಗ್ ಇದೇ ಎಂಬ ಅನುಮಾನ ಮೂಡಿದೆ.

ಒಟ್ಟಿನಲ್ಲಿ ಇನ್ಮುಂದೆಯಾದ್ರು ಅಬಕಾರಿ ಅಧಿಕಾರಿಗಳು ದಾಬಾದತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss