www.karnatakatv.net : ಕಳೆದ ನಾಲ್ಕು ದಿನಗಳಿಂದ ಜಪಾನ್‍ನ ಟೊಕಿಯೋದಲ್ಲಿ ನಡೆಯುತ್ತಿರುವ ಜಾಗತಿಕ ಸ್ಪರ್ಧೆಯಲ್ಲಿ ಭಾರತ ಈವರೆಗೂ ಪದಕಗಳ ಪಟ್ಟಿಯಲ್ಲಿ ಖಾತೆ ತೆರೆದಿರಲಿಲ್ಲ. ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಭಾರತದ ಭವಿನಾ ಪಟೇಲ್ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು ಮಣಿಸಿ ಭಾರತೀಯ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ವಿಶ್ವದ ಮೂರನೇ ಸ್ಥಾನದಲ್ಲಿರುವ ಚೀನಾದ ಆಟಗಾರ್ತಿ ಮಿವೋ ಅವರನ್ನು ಭವಿನಬೇನ್ ರೋಚಕ ಪಂದ್ಯದಲ್ಲಿ 7-11, 11-7, 11-4,9-11, 11-8 ಅಂಕಗಳಿಂದ ಮಣಿಸಿದ್ದಾರೆ. ಮುಂದಿನ ಪಂದ್ಯ ಭಾನುವಾರ ನಡೆಯಲಿದ್ದು ಅಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಯಿಂಗ್ ಝೋವುರನ್ನು ಭವಿನಬೇನ್ ಎದುರಿಸಲಿದ್ದಾರೆ. ಒಂದು ವೇಳೆ ಜಯಗಳಿಸಿದರೆ ಭಾರತಕ್ಕೆ ಚಿನ್ನದ ಪದಕ ತಂದು ಕೊಡುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. ಗೆಲ್ಲದೆ ಇದ್ದರೂ ಬೆಳ್ಳಿ ಪದಕ ಪಕ್ಕ ಆಗಿದೆ.