- Advertisement -
State News: ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ಹಾಗೂ ಮೊಬೈಲ್ ಸಾಗಿಸಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಕೈದಿಗಳಾದ ಗಿರೀಶ್ ಮತ್ತು ರಾಮ್ ಭವನ್ರನ್ನ ಪೋಲೀಸರು ಕೋರ್ಟ್ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕೋರ್ಟ್ನಿಂದ ಮರಳಿ ಜೈಲಿಗೆ ವಾಪಸ್ ಬಂದಿದ್ದ ಆರೋಪಿಗಳನ್ನ ಜೈಲಿನ ಸಿಬ್ಬಂದಿಯವರು ತಪಾಸಣೆ ಮಾಡಿದ್ದು, ಈ ವೇಳೆ ಎಂಟು ಮೊಬೈಲ್ ಹಾಗೂ 57 ಗ್ರಾಂ ಬ್ರೌನ್ ಶುಗರ್ ಜಪ್ತಿ ಮಾಡಲಾಗಿದೆ.
ತೊಡೆ ಭಾಗದಲ್ಲಿ ಕಪ್ಪು ಬಣ್ಣದ ಟೇಪ್ನಿಂದ ಸುತ್ತಿಕೊಂಡು ಮೊಬೈಲ್ ಮತ್ತು ಮಾದಕ ವಸ್ತುವನ್ನ ಬಚ್ಚಿಟ್ಟಿದ್ದು ಬೆಳಕಿಗೆ ಬಂದಿದೆ.ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿರುವ ಪರಪ್ಪನ ಅಗ್ರಹಾರ ಪೊಲೀಸರು, ಕೋರ್ಟ್ಗೆ ಹಾಜರಾಗಿದ್ದಾಗ ಕೈದಿಗಳಿಗೆ ಮೊಬೈಲ್, ಮಾದಕ ವಸ್ತು ನೀಡಿದ್ದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸೆಲ್ಫಿ ತೆಗೆಯಲು ಹೋಗಿ ಮೊಬೈಲ್ ಬಿಟ್ಟು ಓಡಿ ಹೋದರು..?! ಅಂತಹದ್ದೇನಾಯ್ತು ಗೊತ್ತಾ..?!
- Advertisement -