www.karnatakatv.net: ಬೆಂಗಳೂರು- ಶಾಲಾ ಶುಲ್ಕ ವಿಚಾರದಲ್ಲಿ ಸಚಿವರು ಜವಾಬ್ದಾರಿಯುತ ನಿರ್ಧಾರ ಕೈಗೊಂಡಿದ್ದರೆ ಇಂತಹ ಸ್ಥಿತಿ ಬರ್ತಾ ಇರಲಿಲ್ಲ. ಪೋಷಕರ ಸಮಸ್ಯೆ ಬಗೆಹರಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ ಎಂದು ಶಿಕ್ಷಣ ಸಚಿವರ ವಿರುದ್ಧ ನಾರಾಯಣ ಇ-ಟೆಕ್ನೊ ಶಾಲಾ ಮಕ್ಕಳ ಪೋಷಕರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ನೋ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಶಿಕ್ಷಣ ಸಚಿವರ ಪಂಚೇಂದ್ರಿಯಗಳೇ ಸತ್ತು ಹೋಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸೋಲ್ಲ ಅಂದ್ರೆ ಸಚಿವ ಸ್ಥಾನದಲ್ಲಿ ಯಾಕಿದ್ದೀರಿ..? ನಿಮ್ಮ ಸ್ಥಾನವನ್ನ ನಿಭಾಯಿಸೋಕೆ ಆಗೋಲ್ಲ ಅಂತೇಳಿ ಕೆಳಗಿಳಿಯಿರಿ, ಶಿಕ್ಷಣ ಇಲಾಖೆಯನ್ನೇ ಮುಚ್ಚಿಬಿಡಿ ಎಂದು ಪೋಷಕರು ಬೈಗುಳದ ಸುರಿಮಳೆಗೈದಿದ್ದಾರೆ. ಈ ವೇಳೆ ಪೋಷಕರು ಹಾಗು ಪೊಲೀಸರ ನಡುವೆ ವಾಗ್ವಾದ ನಡೀತು.