Wednesday, July 2, 2025

Latest Posts

ಕೋಟಿ, ಕೋಟಿ ಕೊಟ್ರೂ ತೀರದ ವರದಕ್ಷಿಣೆ ದಾಹ!

- Advertisement -

ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿ ಬಾಳಲಿ ಎಂದು ಎದೆ ಉಬ್ಬಿಸಿಕೊಂಡು ಎಲ್ಲವನ್ನೂ ಕೊಟ್ಟರು ಹೆತ್ತವರು. ಕೇಳಿದಷ್ಟು ಕೊಟ್ಟರು – 72 ಲಕ್ಷದ ಮೌಲ್ಯದ 800 ಗ್ರಾಂ ಚಿನ್ನ, 70 ಲಕ್ಷ ಬೆಲೆಯ ಕಾರು. ಅಂದ್ರೆ ಒಟ್ಟು 2.5 ಕೋಟಿ ಮೌಲ್ಯದ ವರದಕ್ಷಿಣೆ. ಆದರೆ ಅಳಿಯನಾದವನು ಮಾತ್ರ ಆ ಮಗಳ ಪ್ರಾಣ ಉಳಿಸಲು ವಿಫಲನಾಗಿದ್ದ. ಮಗಳು, ಸಂತೋಷಪಡುವ ಬದಲಿಗೆ, ಪ್ರತಿದಿನವೂ ಹಿಂಸೆ ಅನುಭವಿಸುತ್ತಿದ್ದಳು. ಪತಿಯ ಮನೆಯವರು ಅವಳ ಬದುಕನ್ನು ನರಕವಾಗಿ ಮಾಡಿದ್ದರು. ಕೊನೆಗೆ ಆಕೆ ಹೆಣವಾಗಿ ಹೋದಳು.

ಈ ದಾರುಣ ಘಟನೆ ನಡೆದಿದ್ದು ತಮಿಳುನಾಡಿನ ತಿರುಪ್ಪೂರಿನಲ್ಲಿ. 27 ವರ್ಷದ ಯುವತಿ ರಿಧನ್ಯಾ. ಏಪ್ರಿಲ್‌ನಲ್ಲಿ ಕವಿನ್ ಕುಮಾರ್ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಅಪ್ಪ ತನ್ನ ಮಗಳು ಚೆನ್ನಾಗಿರಲಿ ಅಂತ 72 ಲಕ್ಷದ ಮೌಲ್ಯದ 800 ಗ್ರಾಂ ಚಿನ್ನ. 70 ಲಕ್ಷ ಮೌಲ್ಯದ ಕಾರು. ವರದಕ್ಷಿಣೆ ನೀಡಿದ್ರು. ಮದುವೆ ನಂತರ ಆ ಮಗಳು ಎಷ್ಟೊಂದು ಕನಸು, ಎಷ್ಟೊಂದು ಆಸೆಗಳನ್ನು ಹೊತ್ತೊಯ್ದಿದ್ದಳೋ ಗೊತ್ತಿಲ್ಲ ಗಂಡನಮನೆಗೆ! ಆದ್ರೆ ಆ ಅತ್ತೆ ಮನೆಯಲ್ಲಿ ಮುದ್ದಾದ ಸೊಸೆಗೆ ಆಗಿದ್ದು ಕೇವಲ ಕಿರುಕುಳ, ಅವಮಾನ ಮತ್ತು ನಿರಂತರ ಹಿಂಸೆ ಅಷ್ಟೇ ತಂದೆ ಇಷ್ಟೆಲ್ಲ ಹಣ ಖರ್ಚು ಮಾಡಿ ಮಗಳ ಮದುವೆ ಮಾಡಿ ಕೊಟ್ರು ಕೆಲವೇ ದಿನಗಳಲ್ಲಿ ಮಗಳ ಸತ್ತ ದೇಹ ನೋಡೋ ಹಾಹಾಗಿತ್ತು ಆ ಹೆತ್ತ ಅಪ್ಪನಿಗೆ.

ಹೀಗೆ ಒಂದು ದಿನ, ಭಾನುವಾರ – ರಿಧನ್ಯಾ ದೇವಸ್ಥಾನಕ್ಕೆ ಹೋಗ್ತೀನಿ ಅಂತ ಮನೆಯಿಂದ ಹೊರಟಳು. ಆದರೆ ಅವಳ ದಾರಿ ದೇವಾಲಯಕ್ಕೆ ಅಲ್ಲ, ಸಾವಿನ ದಾರಿಗೆ. ನಡುರಸ್ತೆಯಲ್ಲಿ ಕಾರ್ ನಿಲ್ಲಿಸಿ, ಅದರಲ್ಲೇ ಕೀಟನಾಶಕ ಸೇವಿಸಿ ತನ್ನ ಜೀವವನ್ನೇ ತಾನೇ ಕಳೆದುಕೊಂಡಳು. ಅದನ್ನ ಕಂಡ ಸ್ಥಳೀಯರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದರು. ರಿಧನ್ಯಾ ಬಾಯಿಯಿಂದ ನೊರೆ ಬರುತ್ತಿತ್ತು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಆದರೆ ಅಷ್ಟರಲ್ಲೇ ಪ್ರಾಣ ಬಿಟ್ಟಿದ್ದಳು.

ಅಂತಿಮ ಕ್ಷಣಗಳಲ್ಲಿ ತನ್ನ ಅಪ್ಪನಿಗೆ ಕಳಿಸಿದ 7 ವಾಟ್ಸಾಪ್ ಆಡಿಯೋ ಕಳುಹಿಸಿದ್ದಳು. ಅದರಲ್ಲಿದೊಂದು ಪದ ಕ್ಷಮಿಸಿಬಿಡಿ ಅಪ್ಪ.. ಈ ಬದುಕು ನನಗೆ ಹೆಚ್ಚು ಆಗುತ್ತಿಲ್ಲ… ನನ್ನ ಅತ್ತೆ ನನ್ನನ್ನು ಮತ್ತೊಬ್ಬನಿಗೆ ಮದುವೆ ಮಾಡಿಕೊಡಲು ಯೋಚಿಸುತ್ತಿದ್ದಾರೆ. ಇಂಥ ಹಿಂಸೆ ತಾಳೋ ಶಕ್ತಿ ನನಗಿಲ್ಲ ಅಂತ ಹೇಳಿ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ.

ಎರಡೂವರೆ ಕೋಟಿ ಮೌಲ್ಯದ ವರದಕ್ಷಿಣೆ ಕೊಟ್ಟರೂ ಅವಳ ಬಾಳಿಗೆ ಮೌಲ್ಯ ಸಿಗಲಿಲ್ಲ. ದೇಶದಲ್ಲಿ ವರದಕ್ಷಿಣೆ ಪಿಡುಗು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಇಂಥಾ ಪ್ರಕರಣಗಳು ಹೆಣ್ಣು ಹೆತ್ತವರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಲೇ ಇದೆ. ಸದ್ಯ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss