ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಪಾಲಕರು: ಗುರು ಪೂರ್ಣಿಮೆಯಂದು ವಿಶೇಷ ಪೂಜೆ

Dharwad News: ಧಾರವಾಡ: ನಿನ್ನೆ ನಾಡಿನಾದ್ಯಂತ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಗಿದೆ. ನಿನ್ನೆ ಭಾನುವಾರ ರಜಾ ದಿನವಾಗಿದ್ದರಿಂದ ಕೆಲವು ಶಾಲೆ, ಕಾಲೇಜುಗಳಲ್ಲಿ ಗುರುಪೂರ್ಣಿಮೆಯನ್ನು ಆಚರಣೆ ಮಾಡಲು ಆಗಿರಲಿಲ್ಲ. ಇಂದು ಧಾರವಾಡದ ಅನೇಕ ಶಾಲೆ, ಕಾಲೇಜುಗಳಲ್ಲಿ ಅರ್ಥ ಪೂರ್ಣವಾಗಿ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಗಿದೆ.

ತಾಯಿಯೇ ಮೊದಲ ಗುರು ಎನ್ನುವಂತೆ ತಂದೆ, ತಾಯಿಯೇ ಮಕ್ಕಳಿಗೆ ಮೊದಲ ಗುರು ಎನ್ನುವಂತೆ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಧಾರವಾಡದ ಕಮಲಾಪುರದಲ್ಲಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಗಮನಸೆಳೆದಿದೆ.

ಇಂದು ಮಕ್ಕಳೊಂದಿಗೆ ಪಾಲಕರನ್ನೂ ಸಾಂಪ್ರದಾಯಿಕ ಉಡುಗೆಯಲ್ಲಿ ಶಾಲೆಗೆ ಬರಮಾಡಿಕೊಂಡ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು, ಮಕ್ಕಳಿಗೆ ತಂದೆ, ತಾಯಿಯಿಂದಲೇ ಅಕ್ಷರಾಭ್ಯಾಸವನ್ನು ಮಾಡಿಸಿದರು. ಅಲ್ಲದೇ ಬಸಯ್ಯ ಹಿರೇಮಠ ಎನ್ನುವವರಿಂದ ಗುರಪೂರ್ಣಿಮೆ ಅಂಗವಾಗಿ ಶಾಲೆಯಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿದರು.

ಎಲ್‌ಕೆಜಿ, ಯುಕೆಜಿ ಹಾಗೂ ನರ್ಸರಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪಾಲಕರಿಂದ ಅಕ್ಷರಾಭ್ಯಾಸ ಕಲಿತರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಪಾಲಕರು ಮಕ್ಕಳಿಗೆ ಯಾವ ರೀತಿ ಅಕ್ಷರಾಭ್ಯಾಸ ಮಾಡಿಸಬೇಕು ಎಂಬುದನ್ನೂ ಹೇಳಿ ಕೊಡಲಾಯಿತು.

About The Author