Thursday, August 28, 2025

Latest Posts

ಗುಡ್‌ ನ್ಯೂಸ್‌ ಕೊಟ್ಟ ಪರಿಣಿತಿ ಚೋಪ್ರಾ ದಂಪತಿ

- Advertisement -

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮೊದಲ ಬಾರಿ ತಾಯಿ ಆಗಿದ್ದು, ಈ ಖುಷಿ ಸುದ್ದಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆತ್ಮ ಸಂಸದ ರಾಘವ್ ಚಡ್ತಾ ಅತ್ಯಂತ ಮುದ್ದಾದ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಚೋಪ್ರಾ ಮತ್ತು ರಾಘವ್ ಚಡಾ ಈ ಶುಭ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಸುಂದರ ಫೋಟೋ ಹಂಚಿಕೊಳ್ಳುವ ಮೂಲಕ ನಾವು ಪಾಲಕರಾಗಿದ್ದೇವೆ ಎಂಬುದನ್ನು ತಿಳಿಸಿದ್ದಾರೆ. ದಂಪತಿಗಳು ಇನ್‌ಸ್ಟಾಗ್ರಾಮ್ ನಲ್ಲಿ ಜಂಟಿ ಪೋಸ್ಟ್‌ನೊಂದಿಗೆ ತಾವು ಮಗುವನ್ನು ನಿರೀಕ್ಷಿಸುತ್ತಿರುವ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಈ ಜೋಡಿ, “ನಮ್ಮ ಪುಟ್ಟ ಪ್ರಪಂಚ ಎಂದು ಬರೆದಿದ್ದಾರೆ. ಪೋಸ್ಟ್ ಮಾಡಿ ಸಂತೋಷದ ಸುದ್ದಿಯನ್ನು ಕೊಟ್ಟ ತಕ್ಷಣ, ಅವರ ಅಭಿಮಾನಿಗಳು ಮತ್ತು ಉದ್ಯಮದ ಸ್ನೇಹಿತರು ಕಾಮೆಂಟ್ ವಿಭಾಗದಲ್ಲಿ ಅಭಿನಂದನೆ ತಿಳಿಸಿದ್ದಾರೆ. ಸೋನಮ್ ಕಪೂರ್, “ಅಭಿನಂದನೆಗಳು ಗೆಳತಿ ಎಂದಿದ್ದಾರೆ. ಚೋಪ್ರಾ ಈ ಸುದ್ದಿಯನ್ನು ರಿವೀಲ್ ಮಾಡುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸೋನಮ್ ಕಪೂರ್, ಭೂಮಿ ಪೆಡೇಕರ್, ಹುಮಾ ಖುರೇಷಿ ಮತ್ತು ನೇಹಾ ಧೂಪಿಯಾ ಸೇರಿದಂತೆ ಹಲವರು ಶುಭಕೋರಿದ್ದಾರೆ.

ದಂಪತಿ ಇತ್ತೀಚೆಗೆ ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಾಗ ಪರಿಣೀತಿ ಅವರ ಗರ್ಭಧಾರಣೆಯ ಬಗ್ಗೆ ರಾಘವ್ ಸುಳಿವು ನೀಡಿದ್ದರು. ಅಲ್ಲಿ ಕಪಿಲ್ ತನ್ನ ತಾಯಿ ಮದುವೆಯಾದ ಕೂಡಲೇ ಮೊಮ್ಮಕ್ಕಳ ಮೋಡ್ ಗೆ ಹೇಗೆ ನೇರವಾಗಿ ಹೋದರು ಎಂಬುದರ ಬಗ್ಗೆ ಹೇಳಿದರು. ನವವಿವಾಹಿತರು ಮೊದಲೇ ಯೋಜಿಸಲು ಅಥವಾ ಕೆಲವು ಕುಟುಂಬದ ಒತ್ತಡ ಎದುರಿಸಲು ಸಿದ್ಧರಾಗಲು ಸಲಹೆ ನೀಡಿದರು. ಆಗ ರಾಘವ್ ಅವರು ನಾವು ನಿಮಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದು ತಮಾಷೆಯಾಗಿ ಹೇಳಿದರು.

 

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss