Sunday, September 8, 2024

Latest Posts

ಅಂಬಣ್ಣವರ ಲೇಔಟ್ ನಲ್ಲಿ ಉದ್ಯಾನವನ ಮಂಗಮಾಯ: ಅತಿಕ್ರಮಣದ ಬಗ್ಗೆ ಪಾಲಿಕೆ ನಿರ್ಲಕ್ಷ್ಯ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ. ಈ ಪಾಲಿಕೆಯ ನಿರ್ಲಕ್ಷ್ಯ ಎಷ್ಟಿದೆ ಅಂದರೆ ಸಾಕಷ್ಟು ಅತಿಕ್ರಮಣ ನಡೆದರೂ ಕೂಡ ಕಿಂಚಿತ್ತೂ ಗಮನ ಹರಿಸಿಲ್ಲ. ಹುಬ್ಬಳ್ಳಿ ಧಾರವಾಡ ಅವಳಿನಗರದ ಬಹುತೇಕ ಬಡಾವಣೆಗಳಲ್ಲಿ ಉದ್ಯಾನವನಗಳು ಮಾಯವಾಗಿವೆ.

ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಾಣ ಮಾಡಬೇಕಿದ್ದ ಉದ್ಯಾನವನಗಳು ಮಂಗಮಾಯ. ಬಹುತೇಕ ಲೇಔಟ್ ಹಾಗೂ ಬಡಾವಣೆಗಳಲ್ಲಿ ಉದ್ಯಾನವನಗಳ ಜಾಗ ಅತಿಕ್ರಮಣ. ಹುಬ್ಬಳ್ಳಿಯ ಗುರುನಾಥ ನಗರದ ಅಂಬಣ್ಣವರ್ ಲೇಔಟ್ ನಲ್ಲಿ ಉದ್ಯಾನವನದ ಜಾಗ ಅತಿಕ್ರಮಣವಾಗಿದೆ. ಬರೋಬ್ಬರಿ 33 ಗುಂಟೆ ಉದ್ಯಾನವನ ಜಾಗ ಅತಿಕ್ರಮಣ‌ ಮಾಡಿ ಮನೆಗಳನ್ನು ನಿರ್ಮಾಣ‌ ಮಾಡಲಾಗಿದೆ. ಬಡಾವಣೆ ನಿರ್ಮಾಣವಾಗಿ 15 ವರ್ಷ ಕಳೆದರೂ ಇಲ್ಲಿನ‌ ನಿವಾಸಿಗಳಿಗೆ ಉದ್ಯಾನವನದ ಭಾಗ್ಯವೇ ಇಲ್ಲದಂತಾಗಿದೆ. ಬಡಾವಣೆ ನಿರ್ಮಾಣವಾದರೂ ಉದ್ಯಾನವನಕ್ಕೆ ಮೀಸಲಿಟ್ಟಿದ್ದ ಜಾಗ ಸಂಪೂರ್ಣ ಅತಿಕ್ರಮಣ ಮಾಡಲಾಗಿದೆ. ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ‌ ಅಕ್ರಮವಾಗಿ ಮನೆಗಳ ನಿರ್ಮಾಣ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಇನ್ನೂ ಉದ್ಯಾನವನವಿಲ್ಲದೇ ಅಳಲು ತೋಡಿಕೊಳ್ಳುತ್ತಿರೋ ಅಂಬಣ್ಣವರ್ ಬಡಾವಣೆಯ ನಿವಾಸಿಗಳು, ಉದ್ಯಾನವನಗಳ‌ ಜಾಗ ಅತಿಕ್ರಮಣವಾಗಿದ್ದರೂ ಕಣ್ಮುಚ್ಚಿ ಕುಳಿತಿರೋ ಹು-ಧಾ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅವಳಿ‌ನಗರದ ಬಹುತೇಕ ಬಡಾವಣೆಗಳಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿದೆ. ಕಣ್ಮುಚ್ಚಿ ಕುಳಿತಿರೋ ಮಹಾಹನಗರ ಪಾಲಿಕೆ‌ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರ ಆಕ್ರೋಶ ಹೊರ ಹಾಕುವಂತಾಗಿದೆ. ಅತಿಕ್ರಮಣವಾಗಿರೋ ಜಾಗಗಳನ್ನ ತೆರವುಗೊಳಿಸಿ ಉದ್ಯಾನವನ‌‌ ನಿರ್ಮಾಣ ಮಾಡುವಂತೆ ನಿವಾಸಿಗಳ‌ ಆಗ್ರಹಿಸಿದ್ದಾರೆ.

Bengaluru Airport : ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ?: ತಮಿಳುನಾಡು ಮಹತ್ವದ ನಿರ್ಧಾರ

iphone: ಐಫೋನ್ ಫ್ಯಾಕ್ಟರಿಯಿಂದ ಸ್ತ್ರೀ ತಾರತಮ್ಯ!

ಜಂಟಿ ಸದನ ಉದ್ದೇಶಿಸಿದ ರಾಷ್ಟ್ರಪತಿ ಭಾಷಣ

- Advertisement -

Latest Posts

Don't Miss