ಪಾರ್ವತಿ ವೇಶಧಾರನಿಗೆ ನೃತ್ಯ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ …!

National News:

ಗಣೇಶೋತ್ಸವದ ನಿಮಿತ್ತ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ಕಲಾವಿದ ಹಾರ್ಟ್ ಅಟ್ಯಾಕ್‌ನಿಂದ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಮರುಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದೆ. ವಿಡಿಯೋ ನೋಡಿದವರು ಶಾಕ್‌ಗೆ ಒಳಗಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕಲಾವಿದರೊಬ್ಬರು ಡ್ಯಾನ್ಸ್ ಮಾಡುವಾಗ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ಬಿಷ್ನಾಹ್ ಪ್ರದೇಶದಲ್ಲಿನ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಗಣೇಶನ ಮುಂದೆಯೇ ಈ ಘಟನೆ ನಡೆದಿದೆ. ಖ್ಯಾತ ಕಲಾವಿದ ಯೋಗೇಶ್ ಗುಪ್ತಾ ಎಂಬುವರು ವೇದಿಕೆ ಮೇಲೆ ಕುಸಿದು ಬಿದ್ದು ಸಾನಪ್ಪಪ್ಪಿದ್ದಾರೆ. ಜಮ್ಮುವಿನ ಕೋಥೇ ಗ್ರಾಮದಲ್ಲಿ ಗಣೇಶ ಉತ್ಸವ ಕರ‍್ಯಕ್ರಮದ ವೇಳೆ ನೃತ್ಯ ಪ್ರರ‍್ಶನ ನೀಡುತ್ತಿದ್ದ ವೇಳೆ ೨೦ ಪ್ರಾಯದ ಯುವ ಕಲಾವಿದ ಯೋಗೇಶ್ ಗುಪ್ತಾ ಎಂಬುವರು ಕುಸಿದು ಬಿದ್ದಿದ್ದಾರೆ. ಯೋಗೇಶ್ ಪಾರ್ವತಿ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಗಣೇಶ ಉತ್ಸವ ಕರ‍್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿ ಪ್ರಾಣ ಪಕ್ಷಿ ಹಾರಿ ಹೋಗಿದೆ.

 

ಸಮುದ್ರದ ಮಧ್ಯೆ ಬೆಂಕಿ…! ವಿನಾಶ ದೂರವಿಲ್ಲ…?!

ಎರಡನೇ ರಾಣಿ ಎಲಿಜಬತ್ ನಿಧನಕ್ಕೆ ಮೋದಿ ಸಂತಾಪ

ಎರಡನೇ ರಾಣಿ ಎಲಿಜಬತ್ ಆರೋಗ್ಯದಲ್ಲಿ ಏರುಪೇರು..! ಭಯಬೇಡವೆಂದು ಲಿಜ್ ಟ್ರಸ್ ಟ್ವೀಟ್

About The Author