ದೆಹಲಿ: ಪಾಸ್ ಪೋರ್ಟ್ ನಲ್ಲಿ ಇನ್ಮುಂದೆ ಫಸ್ಟ್ ಹೆಸರು ಮತ್ತು ಕೊನೆಯ ಹೆಸರು ಎರಡು ಇರಬೇಕು. ಒಂದೇ ಹೆಸರು ಇದ್ದರೆ, ನೀವು ಯುಎಇಗೆ ವಿಮಾನದಲ್ಲಿ ಪ್ರಾಯಾಣ ಮಾಡಲಾಗುವುದಿಲ್ಲ. ಯುಎಇಗೆ ಭೇಟಿ ನೀಡುವವರ ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇನಲ್ಲಿ ವಾಸಮಾಡಲು ಅನುಮತಿಯಿಲ್ಲ. ಅಂದರೆ ಪಾಸ್ ಪೋರ್ಟ್ ನಲ್ಲಿ ಮೊದಲ ಹೆಸರು ಕೊನೆಯ ಹೆಸರು ಎರಡನ್ನೂ ಸರಿಯಾಗಿ ಘೋಷಿಸಿರಬೇಕು.
ಕೆಆರ್ ಎಸ್ ಬೃಂದಾವನ ಪ್ರವೇಶಕ್ಕೆ ನಿರ್ಬಂಧ : ವ್ಯಾಪರಸ್ಥರಿಗೆ, ಕಾವೇರಿ ನೀರಾವರಿ ನಿಗಮಕ್ಕೆ ನಷ್ಟ
ಕಳೆದ ಸೋಮವಾರದಿಂದಲೇ ಈ ನಿಯಮ ಜಾರಿಗೆ ತರಲಾಗಿದೆ ಎಂದು ಯುನೈಟೆಡ್ ಅರಬ್ ಎಮಿರೈಟ್ಸ್ ಅಧಿಕಾರಿಗಳು ಇಂಡಿಗೋ ಏರ್ ಲೈನ್ಸ್ ಗೆ ತಿಳಿಸಿದ್ದಾರೆ. ನವೆಂಬರ್ 21ರಿಂದ ಜಾರಿಗೆ ಬರುವಂತೆ ವಿಮಾನದಲ್ಲಿ ಯುಎಇಗೆ ಪ್ರಯಾಣಿಸುವವರ ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಆ ಪ್ರಾಯಣಿಕರಿಗೆ ಅನುಮತಿ ನೀಡಲಾಗುವುದಿಲ್ಲ. ಹೀಗಾಗಿ ಪ್ರಯಾಣಿಕರು ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆ ಸೂಚಿಸಿದೆ.
ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯಕ : ಮಾಜಿ ಸಿಎಂ ಸಿದ್ದರಾಮಯ್ಯ