ಪಠಾಣ್ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು
ಕೇಸರಿ ಬಿಕಿನಿ ಧರಿಸಿದ್ದಾರೆಂಬ ಕಾರಣಕ್ಕೆ, ಬಿಡುಗಡೆಗೂ ಮುನ್ನವೇ ವಿವಾದ ಹುಟ್ಟುಹಾಕಿದ್ದ ಪಠಾಣ್ ಸಿನಿಮಾ
ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ, ಡಿಂಪಲ್ ಕಪಾಡಿಯಾ ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ ‘ಬೇಷರಮ್ ರಂಗ್’ ಹಾಡು ಬಿಡುಗಡೆಯಾದಾಗಿನಿಂದಲೂ ಪಠಾಣ್ ಪ್ರತಿದಿನವೂ ವಿವಾದದ ಕೇಂದ್ರ ಬಿಂದುವಾಗಿತ್ತು.
ಪಠಾಣ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಧ್ಯೆ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಸೇರಿ ‘ಪಠಾಣ್’ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಅನುಭವ ಹೇಳಿಕೊಂಡಿದೆ
ಈ ವೇಳೆ ಮಾತನಾಡುವ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ. ತಮ್ಮ ಅನುಭವ ಹೇಳಿಕೊಳ್ಳುತ್ತ ಭಾವುಕರಾದ ನಟಿ ‘ಸಿನಿಮಾ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ಬರುವ ಪ್ರೀತಿ-ಹೊಗಳಿಕೆಗೆ ತುಂಬ ಮೌಲ್ಯವಿದೆ. ನಮಗೆ ತೃಪ್ತಿ ನೀಡುತ್ತದೆ ಎಂದರು.