Monday, April 14, 2025

Latest Posts

ಖಾದ್ರಿ ನಡೆಗೆ ಕೈ ಪಡೆ ಕಂಗಾಲು: ಪಠಾಣ್ ಕಾರ್ ಗ್ಲಾಸ್ ಪುಡಿ ಪುಡಿ, ಅಜ್ಜಂಪೀರ್ ಮನೆಯಲ್ಲಿ ಜಮೀರ್ ಲಾಕ್

- Advertisement -

Political News: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ಶಿಗ್ಗಾವಿಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಖಾದ್ರಿ ನಡೆಗೆ ಕೈ ಪಡೆ ಕಂಗಾಲಾಗಿದೆ.

ಖಾದ್ರಿ ಮನವೋಲೈಸಲು ಹುಲಗೂರು ಗ್ರಾಮದ ಖಾದ್ರಿ ಮನೆಗೆ ಸಚಿವ ಜಮೀರ್ ಅಹ್ಮದ್ ಹೋಗಿದ್ದರು. ಆದರೆ ಅಲ್ಲಿ ಜಮೀರ್ ಅವರನ್ನು, ಖಾದ್ರಿ ಬೆಂಬಲಿಗರು ಲಾಕ್ ಮಾಡಿದ್ದಾರೆ. ಜಮೀರ್ ಅಹಮ್ಮದ್ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತಲೇ, ಖಾದ್ರಿ ಅರ್ಜೆಂಟ್ ಆಗಿ ಬೈಕ್‌ನಲ್ಲೇ ಬಂದು, ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಶಿಗ್ಗಾವಿ ತಹಶೀಲ್ದಾರ್ ಕಚೇರಿ ಎದುರು ಖಾದ್ರಿ ಬೆಂಬಲಿಗರು, ಖಾದ್ರಿ ಖಾದ್ರಿ ಎಂದು ಘೋಷಣೆ ಕೂಗುತ್ತ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಅಲ್ಲದೇ ಖಾದ್ರಿ ಮನವೊಲಿಸಲು ಜಮೀರ್ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಕಾರನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಖಾದ್ರಿ ಬೆಂಬಲಿಗರು, ಪಠಾಣ್ ಕಾರಿನ ಗಾಜನ್ನು ಒಡೆದು ಪ್ರತಿಭಟನೆ ನಡೆಸಿದ್ದಾರೆ.

ಈ ಬಾರಿ ಕಾಂಗ್ರೆಸ್‌ನಿಂದ ಅಜ್ಜಂಪೀರ್ ಅವರಿಗೆ ಟಿಕೇಟ್ ನೀಡುತ್ತಾರೆಂದು ಹೇಳಲಾಗಿತ್ತು. ಆದರೆ ಅಜ್ಜಂಪೀರ್‌ಗೆ ಟಿಕೇಟ್ ಕೈ ತಪ್ಪಿದ್ದು, ಯಾಸಿರ್ ಅಹಮದ್ ಖಾನ್ ಪಠಾಣ್‌ಗೆ ಟಿಕೇಟ್ ನೀಡಲಾಯಿತು. ಹೀಗಾಗಿ ಜಮೀರ್ ಅಹಮದ್, ಅಜ್ಜಂಪೀರ್ ಅವರ ಮನವೊಲಿಸಿದ್ದರು.

ಹುಬ್ಬಳ್ಳಿಗೆ ಭೇಟಿ ಕೊಟ್ಟಿರುವ ಸಚಿವ ಜಮೀರ್ ಅಹಮದ್ ಖಾದ್ರಿ ಮನೆಗೆ ಭೇಟಿ ನೀಡಿ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕೂಡ, ಖಾದ್ರಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಮೂಲಕ ಶಿಗ್ಗಾವಿ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿದೆ. ನಾಮಪತ್ರ ಸಲ್ಲಿಸಲು ತಡವಾದ ಕಾರಣ, ಖಾದ್ರಿ ಬೈಕ್ ರ್ಯಾಲಿ ಮೂಲಕ, ಬಂದು, ನಾಮಪತ್ರ ಸಲ್ಲಿಕೆಗೆ 13 ನಿಮಿಷ ಇರುವಾಗ, ನಾಮಪತ್ರ ಸಲ್ಲಿಸಿದ್ದಾರೆ.

- Advertisement -

Latest Posts

Don't Miss