ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಪವನ್ ಕಲ್ಯಾಣ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಪೀಠಾಪುರ ಕ್ಷೇತ್ರದ ಶಾಸಕರಾಗಿರು ಪವನ್ ಕಲ್ಯಾಣ್, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಕುತೂಲದ ಸಂಗತಿ ಅಂದರೆ ಡಿಸಿಎಂ ಪವನ್ ಕಲ್ಯಾಣ್ ತೆಗೆದುಕೊಂಡಿರೋ ನಿರ್ಧಾರವೊಂದು ಈಗ ದೇಶದ ಗಮನ ಸೆಳೆದಿದೆ.
ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ವೇತನ ಪಡೆಯಲು ನಿರಾಕರಿಸಿದ್ದಾರೆ. ಕಾಕಿನಾಡ ಜಿಲ್ಲೆಯ ಗೋಲಾಪೊರ್ಲು ಗ್ರಾಮಕ್ಕೆ ಪವನ್ ಕಲ್ಯಾಣ್ ಭೇಟಿ ನೀಡಿದ್ದ ಎನ್ಟಿಆರ್ ಭರೋಸಾ ಪಿಂಚಣಿ ಪತ್ರಗಳನ್ನು ವಿತರಿಸಿದ್ರು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ವೇತನ ಪಡೆಯುವುದಿಲ್ಲ ಎಂದು ಹೇಳಿದ್ರು.
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಪವನ್, ಜಗನ್ ಅನಗತ್ಯವಾಗಿ ಅರಮನೆ ಕಟ್ಟಿಸಿಕೊಂಡು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಲಾಖೆಗಳಲ್ಲಿ ಹಣದ ಕೊರತೆ ಇದ್ದರೂ ಬಂಗಲೆ ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ರು.