Saturday, December 21, 2024

Latest Posts

ಪೇಟಿಯಂ ಅಪ್ಡೇಟೆಡ್….ಬಂದಿದೆ ಪೇಟಿಯಂನಲ್ಲಿ ಹೊಸ ಆಯ್ಕೆ..

- Advertisement -

PAYTM:

ತಂತ್ರಜ್ಞಾನ ನಿರಂತರ ಹರಿಯೋ ನೀರು ದಿನಕ್ಕೊಂದು ಆವಿಷ್ಕಾರ ದಿನನಿತ್ಯ ಬದಲಾಗುತ್ತಿದೆ ಹೊಸತರ.ಪೇಟಿಯಂ ಕೂಡಾ ಇನ್ನು ಮುಂದೆ ಹೊಸ ಫೀಚರ್ ನೊಂದಿಗೆ ಬದಲಾಗುತ್ತಿದೆ. ಪೇಟಿಯಂ ಮೂಲಕವೇ ಇನ್ನು ಮುಂದೆ ರೈಲು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚ ಬಹುದಾಗಿದೆ. ರೈಲನ್ನು ಈಗ ಟ್ರಾಕ್ ಮಾಡಿ ನಿಮ್ಮ ಪೇಟಿಯಂ ಆಪ್ ಮೂಲಕವೇ.

ಪೇಟಿಯಂ [PAYTM]ಇದೀಗ  ಹೊಸ ಹೊಸ ಫೀಚರ್ ಗಳನ್ನು ತರುತ್ತಿದೆ. ಈಗಾಗಲೆ ಭಾರತೀಯ ರೈಲ್ವೇ ಸಂಚಾರ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಪೇಟಿಯಂನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವುದು ಗೊತ್ತಿರುವ ವಿಚಾರ.ರೈಲು ಪ್ರಯಾಣಿಕರಿಗಾಗಿಯೇ ಅನೇಕ ಫೀಚರ್ ಇದರಲ್ಲಿದೆ. ತಮ್ಮ ಟಿಕೆಟನ್ನು ಕಾಯ್ದಿರಿಸುವ ಪ್ರಕ್ರಿಯೆಯು ಪೇಟಿಯಂನಿಂದ ಸುಲಭ ಸಾಧ್ಯ.ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿ ನಂತರ ಯುಪಿಐ ಆಯ್ಕೆಗಳ ಮೂಲಕ ಪಾವತಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಇದೀಗ ರೈಲು ಎಲ್ಲಿದೆ ಎಂಬುವುದನ್ನು ತಿಳಿಯಬಹುದಾಗಿದೆ. ಪಿಎನ್​ಆರ್​ [PNR]ಸ್ಟೇಟಸ್ ಟ್ರ್ಯಾಕ್ ಮಾಡಬಹುದಾದ ಆಯ್ಕೆಯನ್ನು ಪೇಟಿಯಂ ನೀಡಿದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಪೇಟಿಯಂ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ನಿಮ್ಮ ಪೇಟಿಯಂ ಆಪ್  ಅಪ್ಡೇಟ್ ಮಾಡಿದ ತಕ್ಷಣ ಸಿಗಲಿದೆ. ರೈಲು ಲೈವ್ ಟ್ರ್ಯಾಕ್ ಮಾಡಲು ಮತ್ತು ಪಿಎನ್​ಆರ್​ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಸೂತ್ರ ಅನುಸರಿಸಬಹುದು.

  • paytm ಅಪ್ಲಿಕೇಶನ್‌ಗೆ ಹೋಗಿ ಟ್ರೈನ್ ಸ್ಟೇಟಸ್ ಆಯ್ಕೆಯನ್ನು ಸರ್ಚ್ ಮಾಡಬೇಕು.
  • ಇದಾದ ನಂತರ ಪೇಟಿಯಂ ಟ್ರಾವೆಲ್ ವಿಭಾಗವು ತೆರೆಯುತ್ತದೆ ಮತ್ತು ಇಲ್ಲಿ ರೈಲು, ಬಸ್, ವಿಮಾನಗಳು ಮತ್ತು ಹೆಚ್ಚಿನದನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ.
  • ನಂತರ “ರೈಲುಗಳು” ಆಯ್ಕೆಯನ್ನು ನೀವು ಆರಿಸಬೇಕು. ಇಲ್ಲಿಪಿಎನ್ ಆರ್ ಸ್ಥಿತಿ, ಲೈವ್ ರೈಲು ಸ್ಥಿತಿ, ರೈಲು ಕ್ಯಾಲೆಂಡರ್ ,ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಆಯ್ಕೆ ಕಾಣಬಹುದು.
  • ನಂತರ ನೀವು ರೈಲಿನ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಸರ್ಚ್ ಬಟನ್ ಟ್ಯಾಪ್ ಮಾಡಬೇಕು.
  • ಒಮ್ಮೆ  ಮಾಹಿತಿ ಹಾಕಿದರೆ, ಮುಂಬರುವ ನಿಲ್ದಾಣ, ಕೊನೆಯದಾಗಿ ಕಳೆದ ನಿಲ್ದಾಣ, ಪ್ರಯಾಣಕ್ಕೆ ಉಳಿದಿರುವ ಸಮಯ,  ಆಗಮನ ಮತ್ತು ನಿರ್ಗಮನ ಸಮಯಗಳು, ಪ್ಲಾಟ್‌ಫಾರ್ಮ್ ವಿವರಗಳು,  ನಿರೀಕ್ಷಿತ ಆಗಮನದ ಸಮಯಗಳು ಸೇರಿದಂತೆ ಪ್ರಯಾಣದ ವಿವರಗಳನ್ನು ಅಪ್ಲಿಕೇಶನ್ ಈಗ ತೋರಿಸುತ್ತದೆ.
  • ನಿಮ್ಮ ಟಿಕೆಟ್ ಬುಕಿಂಗ್ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಪಿಎನ್ ಆರ್ ಸಂಖ್ಯೆಯನ್ನು ನಮೂದಿಸಬೇಕು.

ಹೀಗೆ ಪೇಟಿಯಂ ಇದೀಗ ಸಂಪೂರ್ಣ ತಮ್ಮ ಫೀಚರ್ ಗಳನ್ನು ಇನ್ನಷ್ಟು ಹೆಚ್ಚಿಸಿದೆ.

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್

 

- Advertisement -

Latest Posts

Don't Miss